Select Your Language

Notifications

webdunia
webdunia
webdunia
webdunia

ನಿಯಂತ್ರಣ ತಪ್ಪಿ ಪಲ್ಟಿಯಾದ ಕೆಎಸ್‌ಆರ್‌ಟಿಸಿ ಬಸ್‌, ಕಂಡಕ್ಟರ್‌ ನಿಧನ

Raichuru Road Accident

Sampriya

ರಾಯಚೂರು , ಮಂಗಳವಾರ, 9 ಡಿಸೆಂಬರ್ 2025 (15:21 IST)
ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಂಚೇಸುಗೂರು ಕಾಲುವೆಯ ಸೇತುವೆ ಬಳಿ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಅಂಜಳ ಗ್ರಾಮದಿಂದ ದೇವದುರ್ಗಕ್ಕೆ ವಾಪಸ್ಸಾಗುತ್ತಿತ್ತು. ಈ ವೇಳೆ ಅಂಚೇಸುಗೂರು ಕಾಲುವೆಯ ಸೇತುವೆ ದಾಟುವಾಗ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದ್ದರ ಪರಿಣಾಮ ಬಸ್‌ನಲ್ಲಿದ್ದ 40 ಜನರ ಪೈಕಿ 38 ಜನರು ಗಾಯಗೊಂಡಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಡಲೇ ಸ್ಥಳಕ್ಕೆ ಬಂದಿದ್ದಾರೆ. ಸಲಾಕೆಗಳಿಂದ ಬಸ್‌ನ ಗಾಜು ಒಡೆದು, ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ. 

ಇನ್ನೂ ಆಂಬುಲೆನ್ಸ್‌ಗೆ ಕಾದು ಕಾದು ಕೊನೆಗೆ ಗಾಯಗೊಂಡವರನ್ನು ಟಂಟಂ, ಬೈಕ್‌ಗಳಲ್ಲಿ ಗಾಯಾಳುಗಳನ್ನ ರವಾನೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿತ್ವಾ ಚಂಡಮಾರುತ ಪರಿಣಾಮ, ಶ್ರೀಲಂಕಾದ 764 ಧಾರ್ಮಿಕ ಸ್ಥಳಗಳಿಗೆ ಹಾನಿ