ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಸಾಮಾನ್ಯ ವರ್ಗದ ಜನರಿಗೆ ಬಸ್ ದರ ಏರಿಕೆಯ ಗ್ಯಾರಂಟಿ ಕಾದಿದೆ. ಹಬ್ಬ ಮುಗಿದ ಬೆನ್ನಲ್ಲೇ ಬಸ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕಳೆದ 10 ವರ್ಷಗಳಿಂದ ಬಿಎಂಟಿಸಿ ಬಸ್ ದರ ಏರಿಕೆ ಮಾಡಿಲ್ಲ. ಹೀಗಾಗಿ ಬಸ್ ದರ ಏರಿಕೆ ಮಾಡುವಂತೆ ನಿಗಮಗಳಿಂದ ಬೇಡಿಕೆ ಬಂದಿದೆ. ಸಂಕ್ರಾಂತಿ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರಿಗೆ ಸಂಸ್ಥೆ ಮುಖಂಡರ ಸಭೆ ನಡೆಯಲಿದೆ.
ಕೆಎಸ್ ಆರ್ ಟಿಸಿ ದರ ಏರಿಕೆಯಾಗಿ 5 ವರ್ಷಗಳಾಗಿವೆ. ಹೀಗಾಗಿ ಈಗ ಬಸ್ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಆರ್ಥಿಕ ಸಂಕಷ್ಟವನ್ನು ಸರಿದೂಗಿಸಬೇಕಾದರೆ ಬಸ್ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಂಸ್ಥೆಗಳು ಬೇಡಿಕೆಯಿಟ್ಟಿವೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಬಿಡಿ ಭಾಗಗಳೂ ದುಬಾರಿಯಾಗಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಬೇಕೆಂದು ನಾಲ್ಕೂ ನಿಗಮಗಳೂ ಬೇಡಿಕೆಯಿಟ್ಟಿದೆ. ಸಾರಿಗೆ ನಿಗಮಗಳ ಬೇಡಿಕೆಗೆ ಸರ್ಕಾರ ಕೂಡಾ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಬಳಿಕ ಶೇ.15 ರಷ್ಟು ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆಯಿದೆ.