ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡಿದ್ದು ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿವೆ.
ಡಿಸೆಂಬರ್ 31 ರಿಂದ ಮುಷ್ಕರ ನಡೆಸಲು ಆರು ಸಾರಿಗೆ ಸಂಘಟನೆಗಳು ತೀರ್ಮಾನಿಸಿದ್ದು, ಈಗಿನಿಂದಲೇ ಮುಷ್ಕರ ಯಶಸ್ವಿಗೊಳಿಸಲು ಕೆಲಸ ಶುರು ಮಾಡಿವೆ. ಹೀಗಾಗಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ನೌಕರರು ಬಸ್ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.
ಮೆಜೆಸ್ಟಿಕ್, ಬನಶಂಕರಿ ಬಸ್ ಡಿಪೊಗಳಲ್ಲಿ ಮುಷ್ಕರವಿದೆ ಎಂಬ ಕರಪತ್ರವನ್ನು ಹಂಚಲಾಗಿದೆ. ಜನವರಿ 1 ರಿಂದ ಬಸ್ ಇರುವುದಿಲ್ಲ ಸಹಕರಿಸಿ ಎಂದು ಕರಪತ್ರ ಹಂಚಲಾಗಿದೆ. ಡ್ರೈವರ್, ಕಂಡಕ್ಟರ್, ಮೆಕಾನಿಕ್ ಗಳಿಗೆ ಕರಪತ್ರ ನೀಡಲಾಗಿದೆ.
ಶಕ್ತಿ ಯೋಜನೆಯ ಬಾಕಿಯೇ 2,000 ಕೋಟಿ ರೂ.ಗಳಷ್ಟು ಬಾಕಿಯಿದೆ ಎನ್ನಲಾಗಿದೆ. ಇದೆಲ್ಲವನ್ನೂ ಬಿಡುಗಡೆ ಮಾಡಬೇಕು. ಈಗಾಗಲೇ ಸರ್ಕಾರಕ್ಕೂ ಮುಷ್ಕರದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಮಾತುಕತೆಗೆ ಅಹ್ವಾನ ನೀಡಿಲ್ಲ. ಹೀಗಾಗಿ ಮುಷ್ಕರದ ನಿರ್ಧಾರದಲ್ಲಿ ಬದಲಾವಣೆಯಿಲ್ಲ.ಕಳೆದ 38 ತಿಂಗಳಿನಿಂದ ಅರಿಯರ್ಸ್ ನೀಡಿಲ್ಲ. ಸಂಬಳ ಹೆಚ್ಚು ಮಾಡಿಲ್ಲ ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ.