Publish Date: Sat, 07 Jul 2018 (10:53 IST)
Updated Date: Sat, 07 Jul 2018 (10:55 IST)
ಬೆಂಗಳೂರು: ಬಜೆಟ್ ಬಗ್ಗೆ ಪ್ರಶ್ನೆ ಮಾಡಿದರೆ ಎಂಎಲ್ಎಗಳಿಗೆ ಉದ್ಯೋಗ ಇದೆಯಾ ಎಂದು ಕೇಳುವ ಸಿಎಂ ಕುಮಾರಸ್ವಾಮಿಗೆ ಉದ್ಯೋಗ ಇದೆಯಾ? ಹೀಗಂತ ಬಿಜೆಪಿ ನಾಯಕ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್ ನಲ್ಲಿ ಕೆಲವು ಜಿಲ್ಲೆಗಳಿಗೆ ಅನುದಾನ ನೀಡದೇ ತಾರತಮ್ಯ ಮಾಡಿರುವ ಸಿಎಂ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದರೆ ನಮಗೇ ಅಂತಾರೆ. ಸಿಎಂ ಸ್ವಲ್ಪ ಹಲ್ಲು ಬಿಗಿ ಹಿಡಿದು ಮಾತಾಡಲಿ ಎಂದು ಈಶ್ವರಪ್ಪ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಜೆಟ್ ಮಂಡನೆ ಮಾಡಲು ಸಿಎಂ ಬೇಕಿತ್ತಾ? ಯಾವುದೇ ಗುಮಾಸ್ತನೂ ಈ ಬಜೆಟ್ ಮಂಡಿಸುತ್ತಿದ್ದ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.