Select Your Language

Notifications

webdunia
webdunia
webdunia
webdunia

ಇದುವೇ ಫೈನಲ್ ಬಜೆಟ್ ಅಲ್ಲ, ಸಪ್ಲಿಮೆಂಟರಿ ಬರಲಿದೆ: ಸಚಿವ ಶಿವಶಂಕರ ರೆಡ್ಡಿ

ಇದುವೇ ಫೈನಲ್ ಬಜೆಟ್ ಅಲ್ಲ, ಸಪ್ಲಿಮೆಂಟರಿ ಬರಲಿದೆ: ಸಚಿವ ಶಿವಶಂಕರ ರೆಡ್ಡಿ
ಬೆಂಗಳೂರು , ಶನಿವಾರ, 7 ಜುಲೈ 2018 (10:34 IST)
ಬೆಂಗಳೂರು: ಮೊನ್ನೆ ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನಲೆಯಲ್ಲಿ ಕೃಷಿ ಸಚಿವ ಎನ್ ಎಚ್ ಶಿವಶಂಕರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದೆ ಸಪ್ಲಿಮೆಂಟರಿ ಬಜೆಟ್ ಬರಲಿದೆ. ಆಗ ಎಲ್ಲರಿಗೂ ನ್ಯಾಯ ಒದಗಿಸೋಣ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭರವಸೆ ನೀಡಿದ್ದಾರೆ.

ಇನ್ನು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ಅವರು ಹಿರಿಯ ನಾಯಕರು. ಅವರು ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ ವಿಪಕ್ಷಗಳು ಸಣ್ಣ ಅಸಮಾಧಾನವನ್ನೇ ಬಣ್ಣ ಹಚ್ಚಿ ದೊಡ್ಡದು ಮಾಡುತ್ತಿವೆ. ಈ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗಲ್ಲ. ಈ ಸರ್ಕಾರ ಐದು ವರ್ಷ ಪೂರೈಸಿಯೇ ಪೂರೈಸುತ್ತದೆ ಎಂದು ಶಿವಶಂಕರ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಎಚ್ ಡಿಕೆ ಸಿದ್ದರಾಮಯ್ಯಗೂ ಅವಮಾನ ಮಾಡಿದ್ದಾರೆ ಕೆಎಸ್ ಈಶ್ವರಪ್ಪ ಆರೋಪ