Webdunia - Bharat's app for daily news and videos

Install App

ಕೃಷ್ಣ ನದಿ ನೀರು ಹಂಚಿಕೆ: ರಾಜ್ಯಕ್ಕೆ ಬಿಗ್ ರಿಲೀಫ್

Webdunia
ಬುಧವಾರ, 19 ಅಕ್ಟೋಬರ್ 2016 (11:53 IST)
ಕೃಷ್ಣ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಆಂಧ್ರಪ್ರದೇಶಕ್ಕೆ ನೀಡುವ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು ಎಂದು ಕೃಷ್ಣ ನ್ಯಾಯಾಧೀಕರಣ ಮಹತ್ವದ ತೀರ್ಪು ನೀಡಿದೆ.
 
ಆಂಧ್ರಪ್ರದೇಶ ಇಬ್ಭಾಗವಾದ ಬಳಿಕ ಕೃಷ್ಣ ನದಿ ನೀರಿನಲ್ಲಿ ನಮಗೂ ಪಾಲು ಬೇಕೆಂದು ತೆಲಂಗಾಣ ಸರಕಾರ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣ ತೀರ್ಪು ನೀಡಿದೆ. 
 
ಕೃಷ್ಣ ನದಿಯಿಂದ ಕರ್ನಾಟಕಕ್ಕೆ 911 ಟಿಎಂಸಿ ನೀರು, ಮಹಾರಾಷ್ಟ್ರಕ್ಕೆ 611 ಟಿಎಂಸಿ ನೀರು ಹಾಗೂ ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರು ಹಂಚಿಕೆಯಾಗುತ್ತಿದೆ. ಇದೀಗ ಆಂಧ್ರಪ್ರದೇಶ ಇಬ್ಭಾಗವಾದ ಹಿನ್ನೆಲೆಯಲ್ಲಿ ಆಂಧ್ರಕ್ಕೆ ಹಂಚಿಕೆಯಾಗುತ್ತಿರುವ ನೀರನ್ನೆ ತೆಲಾಂಗಣ ಹಂಚಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣ ತೀರ್ಪು ನೀಡಿದೆ
 
2010 ರಲ್ಲಿ ಕೃಷ್ಣ ನದಿ ನೀರು ಹಂಚಿಕೆ ಅಂತಿಮ ತೀರ್ಪು ಬಂದ ಬಳಿಕ ಆಂಧ್ರಪ್ರದೇಶ ಇನ್ನಷ್ಟು ನೀರು ಬೇಕು ಎಂದು ನ್ಯಾಯಾಧೀಕರಣದಲ್ಲಿ ಮರು ಅರ್ಜಿ ಸಲ್ಲಿಸಿತ್ತು. ಬಳಿಕ 2013ರಲ್ಲಿ ಕರ್ನಾಟಕ ಪಾಲಿನ 911 ಟಿಎಂಸಿ ನೀರಲ್ಲಿ 4 ಟಿಎಂಸಿ ನೀರನ್ನು ಆಂಧ್ರಕ್ಕೆ ಬಿಡುವಂತೆ ಆದೇಶ ನೀಡಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ, ಪುಟಿನ್ ಫ್ರೆಂಡ್ ಶಿಪ್ ನೋಡಿ ಡೊನಾಲ್ಡ್ ಟ್ರಂಪ್ ಫುಲ್ ಬರ್ನಿಂಗ್

ಕನ್ನಡ ಬರುತ್ತಾ ಎಂದು ರಾಹುಲ್ ಗಾಂಧಿಗೆ ಕೇಳಿದ್ರೆ ಸಸ್ಪೆಂಡ್ ಆಗ್ತಿದ್ರಿ: ಸಿದ್ದರಾಮಯ್ಯ ಟ್ರೋಲ್

Karnataka Weather: ಇಂದು ಈ ಜಿಲ್ಲೆಗಳಿಗೆ ಕಾದಿದೆ ಭಾರೀ ಮಳೆ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಮುಂದಿನ ಸುದ್ದಿ
Show comments