ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯದ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ. ಈ ನಡುವೆ ರೈತರು ಪ್ರತಿಭಟನೆ ನಡೆಸುತ್ತಿದ್ದರೆ ಕೇಂದ್ರ ಏನು ಕಳ್ಳೆಕಾಯಿ ತಿನ್ನುತ್ತಿದ್ಯಾ ಎಂದು ಕೃಷ್ಣ ಭೈರೇಗೌಡ ಪ್ರಶ್ನೆ ಮಾಡಿದ್ದಾರೆ.
ಕಬ್ಬು ಬೆಳೆಗಾರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದ್ದೇ ತಪ್ಪು ಎನ್ನುತ್ತಿದ್ದಾರೆ. ಇದರ ನಡುವೆ ಸಚಿವ ಕೃಷ್ಣಭೈರೇಗೌಡ ಕೇಂದ್ರದ ಮೇಲೆ ಹರಿಹಾಯ್ದಿದ್ದಾರೆ.
ನಾವು ಸಕ್ಕರೆ ಕಾರ್ಖಾನೆಗಳ ಮಾಲಿಕರ ಜೊತೆ ಸಭೆ ನಡೆಸಿ ರೈತರಿಗೆ ನೀಡಬೇಕಾದ ಹಣ ನೀಡುವಂತೆ ಒತ್ತಡ ಹೇರಿದ್ದೇವೆ. ಈಗ ಕೆಲವು ಕಾರ್ಖಾನೆಗಳ ಮಾಲಿಕರು ನಿಗದಿಯಾಗಿರುವ ಎಂಆರ್ ಪಿಗಿಂತ ಹೆಚ್ಚಿನ ಬೆಲೆಯನ್ನೇ ನೀಡುತ್ತಿದ್ದಾರೆ. ಕಡಿಮೆ ಕೊಡುವವರಿಗೆ ಹೆಚ್ಚು ಕೊಡುವಂತೆ ಹೇಳಿದ್ದೇವೆ.
ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ. ಅಷ್ಟಕ್ಕೂ ಎಂಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಅವರೇ ಕಡಿಮೆ ಎಂಆರ್ ಪಿ ನಿಗದಿ ಮಾಡಿದ್ದಾರೆ. ಅವರು ಹೆಚ್ಚು ಮಾಡಲಿ ಎಂದಿದ್ದಾರೆ. ಇನ್ನು ಈ ಸಮಸ್ಯೆ ಬಗೆಹರಿಸುವುದು ಕೇವಲ ರಾಜ್ಯ ಸರ್ಕಾರದ ಜವಾಬ್ಧಾರಿಯಾದರೆ ಅವರು ಏನಕ್ಕೆ ಇದ್ದಾರೆ? ಕೇಂದ್ರ ಏನು ಕಳ್ಳೆಕಾಯಿ ತಿನ್ನುತ್ತಿದ್ಯಾ ಎಂದು ಕೃಷ್ಣಭೈರೇಗೌಡ ಕಿಡಿ ಕಾರಿದ್ದಾರೆ.