ಬೆಂಗಳೂರು: ಕಬ್ಬು ಬೆಳೆಗಾರರು ಪ್ರತೀ ಕ್ವಿಂಟಾಲ್ ಗೆ 3500 ರೂ. ನಿಗದಿ ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾಗ ಜನ ಒಂದು ಹೆಸರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಅವರೇ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್.
ಕಬ್ಬು ಬೆಳೆಗಾರರು ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದರೂ ಕೋಡಿಹಳ್ಳಿ ಚಂದ್ರಶೇಖರ್ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ನಿನ್ನೆ ಮಾತ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಮಹಾರಾಷ್ಟ್ರದಲ್ಲೆಲ್ಲಾ 3,500 ರೂ. ಕೊಡುವಾಗ ಇಲ್ಲಿ ಕೊಡಲು ಏನು ಸಮಸ್ಯೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದರು.
ಆದರೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತ ಹೋರಾಟಗಳಿಗೆಲ್ಲಾ ಅವರೇ ನೇತೃತ್ವ ವಹಿಸುತ್ತಿದ್ದರು. ಕೇವಲ ರೈತ ಹೋರಾಟ ಮಾತ್ರವಲ್ಲ, ಕೆಎಸ್ಆರ್ ಟಿಸಿ ಪ್ರತಿಭಟನೆಗೂ ಸಾಥ್ ನೀಡುತ್ತಿದ್ದರು.
ಆದರೆ ಈಗ ಯಾಕೆ ಕಾಣಿಸುತ್ತಿಲ್ಲ ಎಂದು ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಇವರ ಪ್ರತಿಭಟನೆ ಕೇವಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರವಾ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಫೋಟೋ ಹಾಕಿ ಎಲ್ಲಿ ಕಾಣೆಯಾಗಿದ್ದಾರೆ ಎಂದು ಕೆಲವರು ಕಿಚಾಯಿಸಿದ್ದಾರೆ. ಅದೇನೇ ಇರಲಿ, ಸದ್ಯಕ್ಕೆ ಕಬ್ಬು ಬೆಳೆಗಾರರು ಮತ್ತು ಸರ್ಕಾರದ ನಡುವೆ ಒಂದು ಸಂಧಾನವಾಗಿದ್ದು, ಸದ್ಯಕ್ಕೆ ಹೋರಾಟವೂ ತಣ್ಣಗಾಗಿದೆ.