Select Your Language

Notifications

webdunia
webdunia
webdunia
webdunia

ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕಳಪೆ ಸಾಮಾಗ್ರಿ ಸರಬರಾಜು ಮಾಡಿದವನ ತರಾಟೆಗೆ ತೆಗೆದುಕೊಂಡ ಕೆ.ಆರ್ ಪೇಟೆ ಶಾಸಕ

ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕಳಪೆ ಸಾಮಾಗ್ರಿ ಸರಬರಾಜು ಮಾಡಿದವನ ತರಾಟೆಗೆ ತೆಗೆದುಕೊಂಡ ಕೆ.ಆರ್ ಪೇಟೆ ಶಾಸಕ
ಮಂಡ್ಯ , ಭಾನುವಾರ, 3 ಫೆಬ್ರವರಿ 2019 (18:59 IST)
ಮಂಡ್ಯ : ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಸರಬರಾಜು ಮಾಡಿದ ಸರಬರಾಜುದಾರನನ್ನು ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯದ ಕೆಆರ್ ಪೇಟೆಯಲ್ಲಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯ ಅಡಿಯಲ್ಲಿ 26ಕ್ಕೂ ಹೆಚ್ಚಿನ ವಿವಿಧ ಫಲಾನುಭವಿಗಳಿಗೆ ಪಂಪ್‍ ಸೆಟ್ ಸರಬರಾಜು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

ಆ ವೇಳೆ ಗುತ್ತಿಗೆದಾರನು ಸರಬರಾಜು ಮಾಡಲು ತಂದಿದ್ದ ಸಬ್ ಮರ್ಸಿಬಲ್ ಪಂಪುಗಳು, ಪೈಪುಗಳು ಹಾಗೂ ವಿವಿಧ ಸಾಮಗ್ರಿಗಳು ಐಎಸ್‍ ಐ ಗುಣಮಟ್ಟದ ಮುದ್ರೆಯಿಲ್ಲದ ಕಳಪೆ ಗುಣಮಟ್ಟದಾಗಿತ್ತು. ಇದನ್ನು ತಪಾಸಣೆ ನಡೆಸಿದ ಶಾಸಕ ಡಾ.ನಾರಾಯಣಗೌಡ ಸರಬರಾಜುದಾರನಿಗೆ, ‘ಯಾರ ಮನೆ ಹಾಳು ಮಾಡಲು ಬಂದಿದ್ದೀಯಾ ನೀನು, ರೈತರಿಗೆ ಸರ್ಕಾರ ದುಡ್ಡು ಕೊಡುತ್ತಿದೆ. ಬಂದು ದುಡ್ಡು ಹೊಡೆದುಕೊಂಡು ಹೋಗಲು ನಿಮ್ಮ ಮನೆ ಆಸ್ತಿ ಅಲ್ಲ ಇದು. ರೈತರ ಮನೆ ಹಾಳು ಮಾಡುತ್ತೀರಾ ನೀವು’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜಕಾರಣದ ಆಗುಹೋಗುಗಳನ್ನು ದೂರದಿಂದಲೇ ನೋಡುತ್ತಿದ್ದೇನೆ- ಎಸ್.ಎಂ ಕೃಷ್ಣ