Publish Date: Mon, 21 Nov 2022 (15:38 IST)
Updated Date: Mon, 21 Nov 2022 (15:40 IST)
ನಿನ್ನೆ ಕೊಪ್ಪಳದಲ್ಲಿ ಅಭ್ಯರ್ಥಿಗಳನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ.ನನಗೂ ಘೋಷಣೆ ಮಾಡುವ ಹಕ್ಕಿಲ್ಲ.ಎಐಸಿಸಿಗೆ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡುವ ಹಕ್ಕು ಇರುವುದು.ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.ಕೆಲ ಸಂದರ್ಭಗಳಲ್ಲಿ ಕಳೆದ ಸೋಲು ಕಂಡವರಿಗೆ ಎನ್ಕ್ರೇಜ್ ಮಾಡಿ ಹೇಳಿರಬಹುದು.ಅದನ್ನು ಬಿಟ್ಟರೆ ಮಲ್ಲಿಕಾರ್ಜುನ ಅವರೇ ನಮಗೆ ಹೈಕಮಾಂಡ್.ಅವರಿಗೆ ಘೋಷಣೆ ಮಾಡುವ ಹಕ್ಕಿದೆ.ನನಗೂ ಕೂಡ ಆ ಹಕ್ಕಿಲ್ಲ ಎಂದು ಡಿಕಿ ಶಿವಕುಮಾರ್ ಹೇಳಿದ್ದಾರೆ.