Select Your Language

Notifications

webdunia
webdunia
webdunia
webdunia

ಸತೀಶ್ ಜಾರಕಿಹೊಳಿ ಹೇಳಿಕೆಯನ್ನ ಖಂಡಿಸುವುದಾಗಿ ಹೇಳಿದ ಡಿಕೆ ಶಿವಕುಮಾರ್

ಸತೀಶ್ ಜಾರಕಿಹೊಳಿ ಹೇಳಿಕೆಯನ್ನ ಖಂಡಿಸುವುದಾಗಿ ಹೇಳಿದ ಡಿಕೆ ಶಿವಕುಮಾರ್
bangalore , ಬುಧವಾರ, 9 ನವೆಂಬರ್ 2022 (15:12 IST)
ಸತೀಶ್ ಜಾರಕಿಹೊಳಿ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡ್ತಿರುವ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಸತೀಶ್ ಜಾರಕಿಹೊಳಿ ಯಾವುದೋ ಪುಸ್ತಕದಲ್ಲಿದೆ ಅಂತ ಹೇಳ್ತಿದ್ದಾರೆ.ಯಾವ ಪುಸ್ತಕದಲ್ಲಿದೆ ನಂಗಂತೂ ಗೊತ್ತಿಲ್ಲ.ಇದನ್ನು ಪಕ್ಷದ ಅಧ್ಯಕ್ಷನಾಗಿ ಖಂಡಿಸುತ್ತೇನೆ.ಈಗಾಗಲೇ ಅವರ ಹೇಳಿಕೆಯನ್ನು ನಾವು ಸಮರ್ಥಿಸೋದಿಲ್ಲ ಅಂತ ಹೇಳಿಯಾಗಿದೆ.ಈಗಲೂ ಅವರು ಮತ್ತೆ ಅದನ್ನೇ ಸಮರ್ಥಿಸಿಕೊಳ್ತಿದ್ದರೆ ಗಮನಿಸಿ ಮಾತನಾಡ್ತೇನೆ ಎಂದು ಹೇಳಿದರು.
 
ಇನ್ನೂ ಮುನಿರತ್ನ ಬಿಜೆಪಿಗೆ ಆಹ್ವಾನಿಸಿದ ವಿಚಾರವಾಗಿ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.ಬಹಳ ಸಂತೋಷ, ಬಿಜೆಪಿಯಲ್ಲಿ ಸಿಎಂ ಕ್ಯಾಂಡಿಡೇಟ್ ಗಳಿಲ್ಲ ಅಂತ ಅರ್ಥ ಆಯ್ತಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರ ಪಟ್ಟಿ ಪರಿಷ್ಕರಣೆ-2023 ಅಂಗವಾಗಿ ಕಾಲ್ನಡಿಗೆ ಜಾಥಾ