Select Your Language

Notifications

webdunia
webdunia
webdunia
webdunia

ಮತದಾರರ ಪಟ್ಟಿ ಪರಿಷ್ಕರಣೆ-2023 ಅಂಗವಾಗಿ ಕಾಲ್ನಡಿಗೆ ಜಾಥಾ

ಮತದಾರರ ಪಟ್ಟಿ ಪರಿಷ್ಕರಣೆ-2023 ಅಂಗವಾಗಿ ಕಾಲ್ನಡಿಗೆ ಜಾಥಾ
bangalore , ಬುಧವಾರ, 9 ನವೆಂಬರ್ 2022 (15:04 IST)
bbmp
ಮತದಾರರ ಪಟ್ಟಿ ಪರಿಷ್ಕರಣೆ-2023 ಭಾಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 7.00ಕ್ಕೆ ಹಡ್ಸನ್ ವೃತ್ತ, ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ ಕಾಲ್ನಡಿಗೆ ಜಾಥ ಹಮ್ಮಿಕೊಂಡಿದ್ದು,  ಕಾರ್ಯಕ್ರಮಕ್ಕೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
 
ಕಾಲ್ನಡಿಗೆ ಜಾಥವು ಹಡ್ಸನ್ ವೃತ್ತ, ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ, ಸೆಂಟ್ರಲ್ ಲೈಬ್ರರಿ, ಉಚ್ಛ ನ್ಯಾಯಾಲಯ, ವಿಧಾನಸೌಧ ರಸ್ತೆ, ಪ್ರೆಸ್ ಕ್ಲಬ್, ಕಬ್ಬನ್ ಉದ್ಯಾನದ ಮೂಲಕ ಬಾಲಭವನದವರೆಗೆ ನಡೆಯಿತು. ಸದರಿ ಜಾಥ ಕಾರ್ಯಕ್ರಮದಲ್ಲಿ ಬಿಬಿಎಂಪಿ ಕಛೇರಿ ಸಿಬ್ಬಂದಿ, ಮುಖ್ಯ ಚುನಾವಣಾಧಿಕಾರಿ ಸಿಬ್ಬಂದಿ, ಚುನಾವಣಾ ಸಾಕ್ಷರತಾ ಸಂಘ, ಎನ್.ಸಿ.ಸಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
 
ಈ ವೇಳೆ ವಿಶೇಷ ಆಯುಕ್ತರಾದ ಎಸ್.ರಂಗಪ್ಪ, ಡಾ. ತ್ರಿಲೋಕ್ ಚಂದ್ರ, ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್, ಉಪ ಆಯುಕ್ತರಾದ ಮುರಳೀಧರ್, ಸಹಾಯ ಆಯುಕ್ತರಾದ ಉಮೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮುಖ ರಸ್ತೆಗಳ ಬದಿಯಲ್ಲಿ ಅಂಗಡಿ ಮಾಡಿಕೊಂಡವರಿಗೆ ಬಿಬಿಎಂಪಿ ಶಾಕ್