Select Your Language

Notifications

webdunia
webdunia
webdunia
webdunia

ಕೋವಿಡ್ -19 ಲಸಿಕೆ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ

ಕೋವಿಡ್ -19 ಲಸಿಕೆ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ
bangalore , ಸೋಮವಾರ, 11 ಅಕ್ಟೋಬರ್ 2021 (20:58 IST)
bbmp
ನಗರದಲ್ಲಿ ಲಸಿಕಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಪಾಲಿಕೆಯ ಜೊತೆ ಕೇರ್ ಇಂಡಿಯಾ ಸಂಸ್ಥೆಯು ಕೈಜೋಡಿಸಿ ಪಾಲಿಕೆ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಿಗೂ ಎರಡು ಆಟೋಗಳಂತೆ 54 ಆಟಗಳಲ್ಲಿ ಎರಡು ದಿನಗಳ ಕಾಲ(ದಿನಾಂಕ: 12-10-21 ಹಾಗೂ 13-10-21) ಧ್ವನಿವರ್ಧಕಗಳ ಮೂಲಕ ಉಚಿತವಾಗಿ ಜಾಗೃತಿ ಮೂಡಿಸಲಾಗುತ್ತದೆ. ಆ ಬಳಿಕ ಪಾಲಿಕೆ ವತಿಯಿಂದ ಲಸಿಕೆ ಪಡೆಯದ ಸ್ಥಳಗಳಲ್ಲಿ ಆಟೋಗಳಲ್ಲಿ ಧ್ವನಿವರ್ದಕಗಳ ಮೂಲಕ ಜಾಗೃತಿ ಮೂಡಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ. 
 
ಕೇರ್ ಇಂಡಿಯಾ ಸಂಸ್ಥೆಯು ಆಟೋಗಳು ಹಾಗೂ ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಇದುವರೆಗೆ 1,23,81,231 ರಷ್ಟು ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 77,99,098(ಶೇ. 86 ರಷ್ಟು) ಮಂದಿಗೆ ಮೊದಲ ಡೋಸ್ ಹಾಗೂ 45,82,133(ಶೇ. 50 ರಷ್ಟು) ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಲಸಿಕಾಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಆಯಾ ವಾರ್ಡ್ ವ್ಯಾಪ್ತಿಯ ಬ್ಲಾಕ್ ಹಾಗೂ ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಪಡೆಯದವವರು ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು. 
 
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ