Publish Date: Wed, 07 Feb 2018 (08:40 IST)
Updated Date: Wed, 07 Feb 2018 (08:42 IST)
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿರುವ ಹಿನ್ನಲೆಯಲ್ಲಿ ಕೊಪ್ಪಳದ ಸರ್ಕ್ಯೂಟ್ ಹೌಸ್ ನವೀಕರಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ 25 ಲಕ್ಷ ಖರ್ಚು ಮಾಡುತ್ತಿರುವುದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
ಈ ಬಗ್ಗೆ ವರದಿ ಪ್ರಸಾರ ಮಾಡಿರುವ ಖಾಸಗಿ ವಾಹಿನಿ ಕೊಪ್ಪಳದ ಸರ್ಕ್ಯೂಟ್ ಹೌಸ್ ಇತ್ತೀಚೆಗಷ್ಟೇ ಉದ್ಘಾಟನೆಯಾಗಿದೆ. ಉದ್ಘಾಟನೆಯಾದ ಬಳಿಕ ಯಾವುದೇ ನಾಯಕರು ಇಲ್ಲಿ ತಂಗಿಲ್ಲ. ಹಾಗಿದ್ದರೂ ರಾಹುಲ್ ಗಾಂಧಿ ವಾಸ್ತವ್ಯದ ಹಿನ್ನಲೆಯಲ್ಲಿ ಮತ್ತೆ 25 ಲಕ್ಷ ರೂ. ವೆಚ್ಚ ಮಾಡುತ್ತಿದೆ ಎಂದಿದೆ.
ಅಷ್ಟೇ ಅಲ್ಲ, ಈ ಬಗ್ಗೆ ಪ್ರಶ್ನಿಸಿದರೆ, ಇಲ್ಲಿ ಗೀಜರ್, ಎಸಿ ಇರಲಿಲ್ಲ. ಹಾಗಾಗಿ ಅದನ್ನು ಅಳವಡಿಸಲು ವೆಚ್ಚ ಮಾಡುತ್ತಿದ್ದೇವಷ್ಟೇ. ಇಟ್ ಈಸ್ ನಾಟ್ ಎ ಬಿಗ್ ಮ್ಯಾಟರ್ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ಹಾಗಿದ್ದರೂ ತಮ್ಮ ಪಕ್ಷದ ನಾಯಕನ ಅನುಕೂಲತೆಗಾಗಿ ಜನರ ತೆರಿಗೆ ದುಡ್ಡು ವೆಚ್ಚ ಮಾಡುತ್ತಿರುವುದು ಸರಿಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ