Publish Date: Tue, 06 Feb 2018 (09:42 IST)
Updated Date: Tue, 06 Feb 2018 (09:44 IST)
ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ ನಟ, ಬಿಜೆಪಿ ನಾಯಕ ಜಗ್ಗೇಶ್ ‘ಪಲ್ಲಂಗ’ ಶಬ್ಧ ಬಳಸಿದ್ದು ಆಕ್ಷೇಪಕ್ಕೊಳಗಾಗುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ರಮ್ಯಾ ಶ್ರಮವಿಲ್ಲದೇ ಪಲ್ಲಂಗದ ಏರಿದವರು ಎಂದು ಜಗ್ಗೇಶ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ಎತ್ತಿದೆ. ಮಹಿಳೆಯ ಮೇಲೆ ಬಿಜೆಪಿ ನಾಯಕನ ಅಸಭ್ಯ ಪದ ಬಳಕೆ ಎಂದು ಜರೆಯುತ್ತಿದೆ.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಜಗ್ಗೇಶ್, ಪಲ್ಲಂಗ ಎಂದರೆ ಮಂಚ ಅಲ್ಲವೋ.. ಗ್ರಾಮ್ಯ ಭಾಷೆಯಲ್ಲಿ ಸುಖದ ಸುಪ್ಪತ್ತಿಗೆ ಅಂದರ್ಥ. ಗ್ರಾಮ್ಯ ಭಾಷೆಯ ಸೊಬಗು ಗೊತ್ತಿಲ್ಲದವರಿಗೆ ಅವರಿಗನಿಸಿದ್ದೇ ಅರ್ಥ ಎಂದು ಜಗ್ಗೇಶ್ ಸಮರ್ಥನೆ ಕೊಟ್ಟಿರುವ ಜಗ್ಗೇಶ್ ನಾನು ಹೇಳಿದ ಶಬ್ಧವೊಂದನ್ನೆ ಇಟ್ಟುಕೊಂಡು ನಿಜವಾದ ವಿವಾದವನ್ನು ಮರೆಮಾಚುತ್ತಿರುವ ಕಾಂಗ್ರೆಸಿಗರ ವಿರುದ್ಧ ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ