Select Your Language

Notifications

webdunia
webdunia
webdunia
webdunia

ಟೀಕಾಕಾರರಿಗೆ ರಮ್ಯಾ ತಿರುಗೇಟು

ಟೀಕಾಕಾರರಿಗೆ ರಮ್ಯಾ ತಿರುಗೇಟು
ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (17:13 IST)
ಬೆಂಗಳೂರು: ಪ್ರಧಾನಿ ಮೋದಿಯವರ ಟಾಪ್ ಎಂಬ ಪದ ಬಳಕೆಯನ್ನು ಟೀಕಿಸುವ ಭರದಲ್ಲಿ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದಕ್ಕೆ ಬಿಜೆಪಿ ಖಂಡಿಸುತ್ತಿರುವುದಕ್ಕೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.
 

ನೀವು ಅಮಲಿನಲ್ಲಿದ್ದಾಗ ಹೀಗೆ ಆಗುತ್ತದೆಯೇ ಎಂದು ಟಾಪ್ ಶಬ್ಧವನ್ನೇ ತಿರುಚಿ ಪಾಟ್ ಎಂದು ರಮ್ಯಾ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ಇದೀಗ ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ ಟ್ವೀಟ್ ಗೆ ಉತ್ತರಿಸಿರುವ ರಮ್ಯಾ ನೀವು ಟೀಕಿಸಿದ ಟ್ವೀಟ್ ಗೆ ನನ್ನನ್ನು ಟ್ಯಾಗ್ ಮಾಡಿದರೆ ಮೋದಿ ಬಗ್ಗೆ ನಾನು ಟ್ಯಾಗ್ ಮಾಡಿರುವ ವಿಡಿಯೋ ಎಲ್ಲರಿಗೂ ಕಾಣುತ್ತದೆ ಎಂಬ ಭಯವೇ.. ಅಯ್ಯೋ ಹೋಗ್ಲಿ ಬಿಡಿ.. ಪಾಟ್ ಎಂದರೆ ಪೊಟೇಟೋ, ಆನಿಯನ್, ಟೊಮೆಟೋ ಎಂದುಕೊಳ್ಳಬಹುದಲ್ಲವೇ? ಎಂದು ರಮ್ಯಾ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿ ಕೈಕೊಟ್ಟಿದ್ದರಿಂದ ಆಕ್ರೋಶದಿಂದ ಅವನ ಮನೆ ಮುಂದೆ ನೃತ್ಯ ಮಾಡಿದ ಪ್ರಿಯತಮೆ