Publish Date: Tue, 06 Feb 2018 (16:45 IST)
Updated Date: Tue, 06 Feb 2018 (16:48 IST)
ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾಗೆ ಸಿಎಂ ಸಿದ್ದರಾಮಯ್ಯ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ರಮ್ಯಾ ಟ್ವೀಟ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಟ್ವೀಟ್ ಬಗ್ಗೆ ನಾನು ಗಮನಿಸಿಲ್ಲ. ಆದರೆ ದೇಶದ ಪ್ರಧಾನಿ ಯಾವ ಪಕ್ಷದವರೇ ಆಗಿದ್ದರೂ ಅವಹೇಳನಕಾರಿಯಾಗಿ ಮಾತನಾಡಲಾರೆ ಎಂದು ಸಿಎಂ ಹೇಳಿದ್ದಾರೆ.
‘ಟ್ವೀಟ್ ನಾನು ಗಮನಿಸಿಲ್ಲ. ನಾನೂ ಪ್ರಧಾನಿಯವರ ಹೇಳಿಕೆಗೆ ತಿರುಗೇಟು ನೀಡಿದ್ದೇನೆ. ಆದರೆ ಯಾವುದನ್ನೂ ವೈಯಕ್ತಿವಾಗಿ ಹೇಳಿಲ್ಲ. ವ್ಯಕ್ತಿತ್ವವನ್ನೇ ಅವಮಾನಿಸುವಂತಹ ಹೇಳಿಕೆಗಳನ್ನು ನಾನು ನೀಡಲ್ಲ. ನಾವು ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇವೆ. ಬಿಜೆಪಿಯವರು ಮಾತ್ರ ಸಂವಿಧಾನ ಬದಲಿಸುವ ಹೇಳಿಕೆ ನೀಡುವವರು’ ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ