ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Krishnaveni K
ಶನಿವಾರ, 13 ಡಿಸೆಂಬರ್ 2025 (10:18 IST)
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸೂಚನೆಯಿದೆ. ಹೀಗಿರುವಾಗ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಈ ಪ್ರಶ್ನೆಗೆ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ರಾಜಕೀಯ, ದೇಶ, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಈ ಬಾರಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ‘ಸಂಗಮೇಶನು ಅರಿವನೆ, ಆದರೆ ಒಳಹಡ್ಡ ಬಂದಿದೆ, ಶಿವನ ಮುಡಿಯುವ ಎರಡು ದುಂಡು ಮಲ್ಲಿಗೆಗಳು ಶಿವನ ಬಲಪಾದ  ಸೇರಿಯಾವು. ಮುಂದೆ ಸುಖಾಂತ್ಯವಾಗಲಿದೆ ಎಂದಿದ್ದಾರೆ.

ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕೀಯದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ ಎಂದಿದ್ದಾರೆ. ಸಂಕ್ರಾಂತಿಯ ನಂತರ ಬರುವ ಭವಿಷ್ಯ ವ್ಯಾಪಾರಸ್ಥರಿಗೆ, ರಾಜರು ದೊರೆಗಳಿಗೆ ಬರುತ್ತದೆ. ಹೀಗಾಗಿ ಈ ಸಂಕ್ರಾಂತಿಯ ನಂತರ ರಾಜಕೀಯ ವಿಚಾರ ನಿರ್ಧಾರವಾಗುತ್ತದೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಶ್ರೀಗಳು ‘ಬೇಡನೊಬ್ಬ ಜಿಂಕೆ ಓಡಿಸಿಕೊಂಡು ಬಂದ. ಅಲ್ಲಿ ಸನ್ಯಾಸಿ ಕೂತಿದ್ದ. ಅವನು ಸನ್ಯಾಸಿ ಬಳಿ ಜಿಂಕೆ ಬಂದಿತ್ತಾ ಎಂದು ಕೇಳುತ್ತಾನೆ. ಹೇಳಿಕೇಳಿ ಅವನು ಸನ್ಯಾಸಿ. ಯಾವುದು ನೋಡಿತು ಅದು ಮಾತನಾಡಲಿಲ್ಲ ಯಾವುದು ಮಾತನಾಡುತ್ತೆ ಅದು ನೋಡಿಲ್ಲ. ನಾನೇನು ಮಾಡಲಿ ಎಂದನಂತೆ’ ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಡಿಕೆಶಿ ಸಿಎಂ ಆಗುತ್ತಾರೆ ಎಂಬುದಕ್ಕೆ ಖಚಿತತೆ ಇಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

ಲೈಂಗಿಕ ದೌರ್ಜನ್ಯ ಆರೋಪದಡಿ ಶಿಕ್ಷಕನಿಗೆ ಚಪ್ಪಲಿ ಹಾರದ ಮೆರವಣಿಗೆ: ಪೊಲೀಸ್ ಅಧಿಕಾರಿಗಳ ಅಮಾನತು

ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ವೋಟ್ ಚೋರಿ ಕಾರಣ ಎಂದ ರಾಹುಲ್ ಗಾಂಧಿ ಟ್ರೋಲ್ video

ನಿವೃತ್ತ ಖಡಕ್‌ ಐಪಿಎಸ್ ಅಧಿಕಾರಿ ಶ್ರೀಲೇಖಾಗೆ ಒಲಿಯುತ್ತಾ ತಿರುವನಂತಪುರಂ ಬಿಜೆಪಿ ಮೇಯರ್‌ ಪಟ್ಟ

ಮುಂದಿನ ಸುದ್ದಿ
Show comments