Select Your Language

Notifications

webdunia
webdunia
webdunia
webdunia

ಕಂಡ ಕಂಡಲ್ಲಿ ಕೊಡವ ಕುಪ್ಯಚಾಲೆ ಮೆರವಣಿಗೆ ಅಖಿಲ ಕೊಡವ ಸಮಾಜ ಖಂಡನೆ

Kodava Kuppachalaya Procession
bangalore , ಶನಿವಾರ, 25 ಡಿಸೆಂಬರ್ 2021 (20:36 IST)
ಕೊಡವರ ಕುಪ್ಯ, ಚಾಲೆ, ಮಂಡೆತುಣಿ, ವಸ್ತ್ರ, ದುಡಿ ತಾಳಗಳಿಗೆ ತನ್ನದೇ ಆದ ಹಿನ್ನಲೆ ಮತ್ತು ಹಿರಿಮೆ ಇದ್ದು, ಅದನ್ನ ಬಳಸುವಾಗಲೂ ಹಲವಾರು ಕ್ರಮಗಳನ್ನ ನಮ್ಮ ಹಿರಿಯರು ಹೇಳಿ ಕಲಿಸಿದ್ದಾರೆ. ಆದರೆ ಇತ್ತೀಚೆಗೆ ಗಮನಿಸಿದಂತೆ ಕೊಡವ ಉಡುಗೆ ತೊಡುಗೆಗಳು ಮಂಗನ ಕೈಗೆ  ಮಾಣಿಕ್ಯ ಕೊಟ್ಟಂತಾಗಿದ್ದು, ಕಂಡಕಂಡಲೆಲ್ಲ ಇತಿಮಿತಿ ಇಲ್ಲದೆ ಬಳಕೆಯಾಗುತ್ತಿರುವುದು ಖಂಡನೀಯ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಸಮದಾನ ವ್ಯಕ್ತಪಡಿಸಿದ್ದಾರೆ.
 
ಕೊಪ್ಯಚಾಲೆ ಕೊಡವರ ಕ್ಷತ್ರಿಯತ್ವದ ಗುರುತು, ಅದು ಗುಲಾಮಗಿರಿಗೆ ಬಳಕೆಯಾಗಬಾರದು ಎಂದಿರುವ ಅವರು, ನಮ್ಮ ಪೂರ್ವಿಕರು ಮಾಡಿರುವ ಕಟ್ಟುಪಾಡುಗಳು, ಪದ್ದತಿ ಆಚರಣೆಗಳು ಅರ್ಥಗರ್ಭಿತವೂ, ವೈಜ್ಞಾನಿಕ ಹಿನ್ನಲೆ ಉಳ್ಳದೂ ಆಗಿದ್ದು, ಪ್ರತಿಯೊಂದು ಆಚರಣೆಗೂ ಕಾಲಮಿತಿ, ಸಮಯ ಸಂಧರ್ಭ ಎನ್ನುವುದಿದೆ. ಆದರೆ ಇತ್ತೀಚೆಗೆ ಅದು ಕೇವಲ ಬಾಯಿಮಾತಿಗೆ, ವೇದಿಕೆ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಒಂದೆಡೆ ದಾರಿ ತಪ್ಪುತ್ತಿರುವ ನಡೆ ನುಡಿಗಳನ್ನು ಸರಿದಾರಿಗೆ ತರಲು, ನಮಗೆ ನಾವೇ ನೀತಿ ನಿಯಮಗಳನ್ನ ಮಾಡಿ, ಜಾಗೃತ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸುವವರಾದರೆ, ಮತ್ತೋಂದೆಡೆ ನಮ್ಮ ಕುಪ್ಯ ಚಾಲೆ, ದುಡಿಕೊಟ್ಟ್ ಪಾಟ್ ಯಾರ್ಯಾರನ್ನು ಮೆಚ್ಚಿಸುವ, ಗುಲಾಮಗಿರಯನ್ನು ಸಾಬೀತುಪಡಿಸುವ ಪ್ರಯತ್ನಗಳು ನಡೆಯುತ್ತಿರುವುದು ಕಳವಳಕಾರಿಯಾದದ್ದು ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್ ಸೋಂಕಿತರಲ್ಲಿ ಶೇ.91ರಷ್ಟು ಮಂದಿ ಸಂಪೂರ್ಣ ಲಸಿಕೆ ಪಡೆದಿದ್ರು: ಕೇಂದ್ರ ಆರೋಗ್ಯ ಇಲಾಖೆ