Select Your Language

Notifications

webdunia
webdunia
webdunia
webdunia

ಮೊಹರಂ ಮೆರವಣಿಗೆ ವೇಳೆ ಅವಘಢ: ಇಬ್ಬರ ಸಾವು

rayachur
bengaluru , ಶುಕ್ರವಾರ, 20 ಆಗಸ್ಟ್ 2021 (14:44 IST)
ಮೊಹರಂ ಕೊನೆಯ ದಿನವಾದ ಇಂದು ಬೆಳಿಗ್ಗೆ
ಹಿರೇದೇವರ ಪಂಜಾ ಮೆರವಣಿಗೆ ವೇಳೆ, ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಮೊಹರಂ ಪಂಜಾ ಮೆರವಣಿಗೆ ಮಾಡುವ ವೇಳೆಯಲ್ಲಿ, ವಿದ್ಯುತ್ ಅವಘಡ ಸಂಭವಿಸಿ ಹುಸೇನಸಾಬ ದೇವರಮನಿ (50) ಹಾಗೂ ಹುಲಿಗೆಮ್ಮ (18) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೆಳಗ್ಗೆ 4 ರಿಂದ 5 ಗಂಟೆಯಲ್ಲಿ ಹಿರೇದೇವರು ಸವಾರಿ ಮಾಡಿಸುವ ವೇಳೆ, ಮೇಲೆ ಹಾದು ಹೋಗಿದ್ದ ವಿದ್ಯುತ್ ವೈರ್ ದೇವರಿಗೆ ತಗುಲಿದ್ದರಿಂದ ಈ ದುರ್ಘಟನೆ ಜರುಗಿದೆ.
ಕೂಡಲೇ ಲಿಂಗುಸುಗೂರು ಆಸ್ಪತ್ರೆಗೆ ದಾಖಲಿಸುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಸ್ಕಿ ಪೊಲೀಸರು ಬೇಟಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ?