ಕೊಡಗು: ಒಬ್ಬ ಮನುಷ್ಯ ಕಷ್ಟದಲ್ಲಿದ್ದರೆ ಇನ್ನೊಬ್ಬ ಮನುಷ್ಯ ಆಗುವುದು ಇಂದಿನ ದಿನಗಳಲ್ಲಿ ಅಪರೂಪ. ಆದರೆ ನಾವು ಹಾಗಲ್ಲ ಎಂದು ಈ ಆನೆ ತೋರಿಸಿಕೊಟ್ಟಿದೆ. ಕೊಡಗಿನ ಆನೆಗಳ ಈ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಡಗಿನಲ್ಲಿ ಆನೆಯೊಂದು ಕಬ್ಬಿಣದ ಗೇಟ್ ಗೆ ತಲೆ ತೂರಿಸಿಕೊಂಡು ಹೊರತೆಗೆಯಲಾಗದೇ ಒದ್ದಾಡುತ್ತಿತ್ತು. ಇಡೀ ಗೇಟ್ ನ್ನೇ ಕಿತ್ತು ಹಾಕಲು ನೋಡಿದರೂ ಆನೆಗೆ ತಲೆ ಹೊರಗೆ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ.
ಇತ್ತ ಫಾರೆಸ್ಟ್ ಅಧಿಕಾರಿಗಳೂ ಅಸಹಾಯಕತೆಯಿಂದ ನೋಡಿಕೊಂಡು ನಿಂತಿದ್ದರು. ಆಗ ಪಕ್ಕದಲ್ಲೇ ಇದ್ದ ಇನ್ನೊಂದು ಆನೆ ತನ್ನ ಸೊಂಡಿಲಿನಿಂದ ತಲೆ ಸಿಲುಕಿಕೊಂಡು ಒದ್ದಾಡುತತಿದ್ದ ಆನೆಗೆ ಹೊರಗೆ ಬರಲು ಸಹಾಯ ಮಾಡಿದೆ.
ಬಳಿಕ ಸದ್ದಿಲ್ಲದೇ ತನ್ನ ಕೆಲಸ ಮುಗಿಸಿ ಅತ್ತ ನಡೆದಿದೆ. ಇತ್ತ ಸಿಕ್ಕಿಹಾಕಿಕೊಂಡಿದ್ದ ಆನೆಯೂ ನಿರಾಳವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂಥಾ ಬುದ್ಧಿ ಬಹುಶಃ ಮನುಷ್ಯರಿಗೂ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.