Select Your Language

Notifications

webdunia
webdunia
webdunia
webdunia

ಎಸ್ಕೇಪ್ ಆಗಲು ಯತ್ನಿಸಿದ ಚಿರತೆಯ ಬಾಲ ಹಿಡಿದು ಬಲೆಗೆ ಎಸೆದ ಭೂಪ

Strong Boy Catched Leopard, Viral Video, Tumakuru Leopard Caught,

Sampriya

ತಿಪಟೂರು , ಮಂಗಳವಾರ, 7 ಜನವರಿ 2025 (19:40 IST)
Photo Courtesy X
ತಿಪಟೂರು: ಸಾರ್ವಜನಿಕರ ಕೂಗಾಟದಿಂದ ಬಲೆಗೆ ಬಿದ್ದಿದ್ದ ಚಿರತೆ ತಪ್ಪಿಸಿಕೊಳ್ಳಲು ಹೀಓದಾಗ ಅಲ್ಲೇ ಇದ್ದ ಗಟ್ಟಿ ಗುಂಡಿಗೆಯ ಯುವಕನೊಬ್ಬ ಅದರ ಬಾಲದ ಮೂಲದ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲ್ಲೂಕಿನ ಕಸಬಾ ಹೋಬಳಿ ರಂಗಾಪುರ ಚಿಕ್ಕಕೊಟ್ಟಿಗೇನಹಳ್ಳಿ ಬಳಿ ಸಾರ್ವಜನಿಕರ ನೆರವಿನೊಂದಿಗೆ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದು, ಮಂಗಳವಾರ ಮೈಸೂರು ಪುನರ್ವಸತಿ ಕೇಂದ್ರಕ್ಕೆ ಬಿಡಲು ಕರೆದೂಯ್ಯಲಾಯಿತು.

ತಾಲ್ಲೂಕಿನ ಚಿಕ್ಕಕೊಟ್ಟಿಗೇನಹಳ್ಳಿ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ತೋಟದಲ್ಲಿ ಎರಡು ದಿನದಿಂದ ತೋಟದ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದರು. ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡಬೇಕಾಯಿತು.

ಇನ್ನೂ ಬಲೆಗೆ ಬಿದ್ದಿದ್ದ ಚಿರತೆ ಸಾರ್ವಜನಿಕರ ಕೂಗಾಟದಿಂದ ತಪ್ಪಿಸಿಕೊಳ್ಳುತ್ತಿತ್ತು. ಸುಸ್ತಾಗಿದ್ದ ಚಿರತೆಯ ಬಾಲವನ್ನು ರಂಗಾಪುರ ಗ್ರಾಮದ ಆನಂದ್ ಎಂಬ ಯುವಕ ಹಿಡಿದಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ ಪರಿಣಾಮ ಚಿರತೆ ಸೆರಯಾಗಿದೆ.

ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್ ಡಿ., ವಲಯ ಅರಣ್ಯಾಧಿಕಾರಿ ಕೆ.ಎಲ್ ಮಧು, ಉಪ ಅರಣ್ಯಾಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಕಾರ್ಯಚರಣೆ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್‌ಡಿಕೆ ಆರೋಪ ಬೆನ್ನಲ್ಲೇ ದೆಹಲಿಯಲ್ಲಿ ಜೆಡಿಎಸ್‌ ನಾಯಕರ ಜತೆ ಡಿಕೆಶಿ ಗುಸುಗುಸು