ಬೆಂಗಳೂರು: ಕೆಎನ್ ರಾಜಣ್ಣ ಅವರ ರಾಜೀನಾಮೆ ಬೆನ್ನಲ್ಲೇ ಡಿಕೆ ಶಿವಕುಮಾರ್ ಆಪ್ತ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ರಂಗನಾಥ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇದು ಸಚಿವ ಸಂಪುಟ ಪುನಾರಚನೆ ಇರಬಹುದು ಅಥವಾ ಡಿಸಿಸಿ ಬ್ಯಾಂಕ್ ಚುನಾವಣೆ ಇರಬಹುದು. ಈ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳಿದ್ದಾರೆ.
ರಾಜಣ್ಣ ರಾಜೀನಾಮೆಯಿಂದ ತುಮಕೂರು ಜಿಲ್ಲೆಗೆ ಆಗುವ ಪರಿಣಾಮದ ಬಗ್ಗೆ ಈಗಲೇ ನಾನು ಏನು ಹೇಳಲಾರೆ. ಇದು ಸಿಎಂ ನಿರ್ಧಾರವೂ ಇರಬಹುದು ಎಂದು ತಿಳಿಸಿದ್ದಾರೆ.
ಹೈಕಮಾಂಡ್ ಖಡಕ್ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.