Select Your Language

Notifications

webdunia
webdunia
webdunia
webdunia

KMF Recruitment 2021: ತಿಂಗಳಿಗೆ ₹ 97,000 ಸಂಬಳ

KMF Recruitment 2021: ತಿಂಗಳಿಗೆ ₹ 97,000 ಸಂಬಳ
vijayanagara , ಸೋಮವಾರ, 20 ಡಿಸೆಂಬರ್ 2021 (21:30 IST)
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಿದೆ. ಒಟ್ಟು 39 ಸಹಾಯಕ ವ್ಯವಸ್ಥಾಪಕರು, ಸಿಸ್ಟ್ಂ ಅಧಿಕಾರಿ, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು, ಕೆಮಿಸ್ಟ್ ದರ್ಜೆ, ಆಡಳಿತ ಸಹಾಯಕ, ಲೆಕ್ಕ ಸಹಾಯಕರು, ಕಿರಿಯ ಸಿಸ್ಟ್ಂ ಆಪರೇಟರ್, ಕಿರಿಯ ತಾಂತ್ರಿಕ, ಹಾಲು ರವಾನೆಗಾರರು ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://bamulnandini.coop/ ಗೆ ಭೇಟಿ ನೀಡಬಹುದು.
 
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
 
ಸಂಸ್ಥೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ
ಹುದ್ದೆಯ ಹೆಸರು ಸಹಾಯಕ ವ್ಯವಸ್ಥಾಪಕರು, ಸಿಸ್ಟ್ಂ ಅಧಿಕಾರಿ, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು, ಕೆಮಿಸ್ಟ್ ದರ್ಜೆ, ಆಡಳಿತ ಸಹಾಯಕ, ಲೆಕ್ಕ ಸಹಾಯಕರು, ಕಿರಿಯ ಸಿಸ್ಟ್ಂ ಆಪರೇಟರ್, ಕಿರಿಯ ತಾಂತ್ರಿಕ, ಹಾಲು ರವಾನೆಗಾರರು
ಒಟ್ಟು ಹುದ್ದೆಗಳು 39
ವಿದ್ಯಾರ್ಹತೆ ಯಾವುದೇ ಪದವಿ
ಉದ್ಯೋಗದ ಸ್ಥಳ ವಿಜಯಪುರ, ಬಾಗಲಕೋಟೆ
ವೇತನ ಮಾಸಿಕ ₹ 21,400-97,100
ಅರ್ಜಿ ಸಲ್ಲಿಕೆ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 18/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/01/2021
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/01/2021
 
ಹುದ್ದೆಯ ಮಾಹಿತಿ:
ಸಹಾಯಕ ವ್ಯವಸ್ಥಾಪಕರು - 5 ಹುದ್ದೆಗಳು
ಸಿಸ್ಟ್ಂ ಅಧಿಕಾರಿ - 1 ಹುದ್ದೆ
ತಾಂತ್ರಿಕ ಅಧಿಕಾರಿ - 2 ಹುದ್ದೆಗಳು
ಮಾರುಕಟ್ಟೆ ಅಧೀಕ್ಷಕರು - 1 ಹುದ್ದೆ
ವಿಸ್ತರಣಧಿಕಾರಿ - 8 ಹುದ್ದೆಗಳು
ಮಾರುಕಟ್ಟೆ ಸಹಾಯಕರು - 2 ಹುದ್ದೆಗಳು
ಕೆಮಿಸ್ಟ್ ದರ್ಜೆ - 2 ಹುದ್ದೆಗಳು
ಆಡಳಿತ ಸಹಾಯಕ - 1 ಹುದ್ದೆ
ಲೆಕ್ಕ ಸಹಾಯಕರು - 4 ಹುದ್ದೆಗಳು
ಕಿರಿಯ ಸಿಸ್ಟ್ಂ ಆಪರೇಟರ್ - 2 ಹುದ್ದೆಗಳು
ಕಿರಿಯ ತಾಂತ್ರಿಕ - 2 ಹುದ್ದೆಗಳು
ಹಾಲು ರವಾನೆಗಾರರು - 4 ಹುದ್ದೆಗಳು
ಒಟ್ಟು 39 ಹುದ್ದೆಗಳು
 
ಇದನ್ನೂ ಓದಿ: RDPR Karnataka: ಪದವೀಧರರಿಗೆ ಸರ್ಕಾರಿ ಉದ್ಯೋಗ, ಮಾಸಿಕ ವೇತನ ₹ 24,000, ಬೆಂಗಳೂರಿನಲ್ಲಿ ಕೆಲಸ
 
ವಿದ್ಯಾರ್ಹತೆ:
ಸಹಾಯಕ ವ್ಯವಸ್ಥಾಪಕರು, ಸಿಸ್ಟ್ಂ ಅಧಿಕಾರಿ, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು, ಕೆಮಿಸ್ಟ್ ದರ್ಜೆ, ಆಡಳಿತ ಸಹಾಯಕ, ಲೆಕ್ಕ ಸಹಾಯಕರು, ಕಿರಿಯ ಸಿಸ್ಟ್ಂ ಆಪರೇಟರ್, ಕಿರಿಯ ತಾಂತ್ರಿಕ, ಹಾಲು ರವಾನೆಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಯಾವುದೇ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ, ಎಸ್​ಎಸ್​ಎಲ್​​ಸಿ, ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.
 
ವಯೋಮಿತಿ:
ಸಹಾಯಕ ವ್ಯವಸ್ಥಾಪಕರು, ಸಿಸ್ಟ್ಂ ಅಧಿಕಾರಿ, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು, ಕೆಮಿಸ್ಟ್ ದರ್ಜೆ, ಆಡಳಿತ ಸಹಾಯಕ, ಲೆಕ್ಕ ಸಹಾಯಕರು, ಕಿರಿಯ ಸಿಸ್ಟ್ಂ ಆಪರೇಟರ್, ಕಿರಿಯ ತಾಂತ್ರಿಕ, ಹಾಲು ರವಾನೆಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-35 ವರ್ಷದೊಳಗಿರಬೇಕು. 2ಎ, 2ಬಿ, 3ಎ ಮತ್ತು 3ಬಿ ಯ ಗರಿಷ್ಟ 38 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯಯನ್ನು ನೀಡಲಾಗಿರುತ್ತದೆ.
 
ಅರ್ಜಿ ಶುಲ್ಕ:
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ವಿಜಯಪುರ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 1000/-ರೂ ಮತ್ತು ಪರಿಶಿಷ್ಟ ಜಾತಿ/ಪರಿ‍ಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಹೇಳಲಾಗಿದೆ.
 
 
ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ SSLC ಪಾಸಾದವರಿಗೂ ಉದ್ಯೋಗ, ಮಾಸಿಕ ವೇತನ ₹ 28,015
 
ವೇತನ:
ಸಹಾಯಕ ವ್ಯವಸ್ಥಾಪಕರು - ಮಾಸಿಕ ₹ 52,650- 97,100
ಸಿಸ್ಟ್ಂ ಅಧಿಕಾರಿ -ಮಾಸಿಕ ₹ 43,100- 83,900
ತಾಂತ್ರಿಕ ಅಧಿಕಾರಿ - ಮಾಸಿಕ ₹ 43,100 - 83,900
ಮಾರುಕಟ್ಟೆ ಅಧೀಕ್ಷಕರು - ಮಾಸಿಕ ₹ 40,900- 78,200
ವಿಸ್ತರಣಧಿಕಾರಿ - ಮಾಸಿಕ ₹ 33,450- 62,600
ಮಾರುಕಟ್ಟೆ ಸಹಾಯಕರು - ಮಾಸಿಕ ₹ 27,650- 52,650
ಕೆಮಿಸ್ಟ್ ದರ್ಜೆ - ಮಾಸಿಕ ₹ 27,650- 52,650
ಆಡಳಿತ ಸಹಾಯಕ -ಮಾಸಿಕ ₹ 27,650- 52,650
ಲೆಕ್ಕ ಸಹಾಯಕರು -ಮಾಸಿಕ ₹ 27,650- 52,650
ಕಿರಿಯ ಸಿಸ್ಟ್ಂ ಆಪರೇಟರ್ - ಮಾಸಿಕ ₹ 27,650- 52,650
ಕಿರಿಯ ತಾಂತ್ರಿಕ - ಮಾಸಿಕ ₹ 21,400- 42,000
ಹಾಲು ರವಾನೆಗಾರರು - ಮಾಸಿಕ ₹ 21,400- 42,000

Share this Story:

Follow Webdunia kannada

ಮುಂದಿನ ಸುದ್ದಿ

ಮಲೆನಾಡಿನಲ್ಲಿ ಕುಖ್ಯಾತಿ ಗಳಿಸಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೋಲಿಸರಿಗೆ ಶರಣು…!!