Publish Date: Sat, 14 Sep 2019 (15:44 IST)
Updated Date: Sat, 14 Sep 2019 (15:51 IST)
ಕೆಎಲ್ ಎಸ್ ಸಂಸ್ಥೆಯ 29ನೇ ಸಂಸ್ಥಾಪನಾ ದಿನಾಚಾರಣೆಯನ್ನು ಸೆ.16 ರಂದು ಐಎಂಇಆರ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಅತುಲ್ ದೇಶಪಾಂಡೆ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವಿಶೇಷವಾಗಿ ಕರ್ನಾಟಕ ಕಾನೂನು ಸಂಸ್ಥೆ ಪ್ರಗತಿಗಾಗಿ ಉದ್ಯಮಿ ರಾವಸಾಹೇಬ ಗೋಗಟೆ ಕೊಡುಗೆ ಸ್ಮರಿಸಿ ಅವರ ಜನ್ಮದಿನದಂದೇ ಕೆಎಲ್ಎಸ್ ಸಂಸ್ಥಾಪನಾ ದಿನಾಚಾರಣೆ ಆಚರಿಸಲಾಗುತ್ತಿದೆ. ಈ ಭಾಗದ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು, ಉದ್ಯಮಿಗಳು ಪ್ರತಿ ವರ್ಷ ಎದುರು ನೋಡುವ ಕಾರ್ಯಕ್ರಮ ಇದಾಗಿದೆ. ಈ ಸಂದರ್ಭದಲ್ಲಿ ಉದ್ಯಮದ ಬೆಳವಣಿಗೆಗಾಗಿ ಸ್ಥಳೀಯ ಸಾಧಕ ಉದ್ಯಮಿಯೊಬ್ಬರನ್ನು ಸನ್ಮಾಸಿ ಗೌರವಿಸಲಾಗುತ್ತಿದೆ ಎಂದಿದ್ದಾರೆ.
ಕೆಎಲ್ ಎಸ್ ಸಂಸ್ಥಾಪನಾ ದಿನಾಚಾರಣೆಯ ಅಂಗವಾಗಿ ಸೆ.15 ಸಂಜೆ 6 ಕ್ಕೆ ಐಎಂಇಆರ್ ಸಭಾಂಗಣದಲ್ಲಿ ಪುಣೆಯ ಪಂಡಿತ್ ಸುಹಾಸ್ ವ್ಯಾಸ್ ಅವರ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಎಂ.ಆರ್.ಕುಲಕರ್ಣಿ ಅಧ್ಯಕ್ಷತೆ ವಹಿಸುವರು, ಪುಣೆಯ ಅತ್ಯಾಸಾ ಕನ್ಸಲ್ಟಿಂಗ್ ಪ್ರೈ.ಲಿ. ಸಂಸ್ಥಾಪಕ, ನಿರ್ದೇಶಕ ನಿಕೇತ ಕಾರಜಗಿ ಮುಖ್ಯ ಅತಿಥಿಗಳಾಗಿ ಗೋಗಟೆ ಸಂಸ್ಥೆಯ ಪರಿವಾರದವರು ಆಗಮಿಸಲಿದ್ದಾರೆ ಎಂದಿದ್ದಾರೆ.