Select Your Language

Notifications

webdunia
webdunia
webdunia
webdunia

ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆ ಕುರಿತು ಕೆ.ಜೆ ಜಾರ್ಜ್ ಸಭೆ

ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆ ಕುರಿತು ಕೆ.ಜೆ ಜಾರ್ಜ್ ಸಭೆ
bangalore , ಮಂಗಳವಾರ, 21 ನವೆಂಬರ್ 2023 (16:00 IST)
ಇಂಧನ ಸಚಿವ ಕೆ ಜೆ ಜಾರ್ಜ್ ಸುದ್ದಿಗೊಷ್ಠಿ  ನಡೆಸಿದ್ದು,ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ .ಪವರ್ ಭೇಡಿಕೆ ಈ ಭಾರಿ ಹೆಚ್ಚಾಗಿದೆ .ಮಳೆ ರಾಜ್ಯದಲ್ಲಿ ಕಡಿಮೆ ಆಗಿದೆ .ಥರ್ಮಲ್ ಪ್ಲಾಂಟ್ ಗಳನ್ನು ದುರಸ್ಥಿ ಮಾಡುತ್ತಿದ್ದೇವೆ.14,000 ಮೇಗಾ ವ್ಯಾಟ್ ವಿದ್ಯುತ್  ಗೆ ಭೇಡಿಕೆ ಬಂದಿದೆ .

ಸೋಲಾರ್ 51% ಸೋಲಾರ ಬಳಸುತ್ತಿದ್ದೇವೆ.ಸೋಲಾರದು ಮಳೆ ಇಲ್ಲಾ ಅಂದ್ರು ಮೋಡ ಇತ್ತು ಅದು ಕೂಡಾ ತೊಂದರೆ ಆಗಿದೆ.ಕರ್ನಾಟಕವೇ ಕತ್ತಲೆ ಹೋಗಿದೆ ಎಂದು ಹಲವರು ಹೇಳಿದ್ದಾರೆ ಮರಾಜಕೀಯವಾಗಿ ಈ ರೀತಿ ಮಾತನಾಡಿದ್ದಾರೆ.

ನಾವು ಕಮರ್ಶಿಯಲ್ ಗೆ,ಖಾರ್ಖಾನೆಗಳಿ ಗೆ  ವಿದ್ಯುತ್ ಕಟ್ ಮಾಡಿಲ್ಲಾ,ಯಾರಿಗೂ ಕಡಿಮೆ ಮಾಡಿಲ್ಲ.ಥರ್ಮಲ್ ಪ್ಲಾಂಟ್ ಗಳನ್ನ ಉತ್ತೇಜನಕ್ಕೆ ಹೇಳಿದ್ದಾರೆ.ಪಂಜಾಬ್ , ಉತ್ತರಪ್ರದೇಶದಿಂದ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ.ರಾಜ್ಯದಲ್ಲಿರುವ ರಾಯಚೂರು,ಬಳ್ಳಾರಿ ಸೇರಿದಂತೆ ಥರ್ಮಲ್ ಪ್ಲಾಂಟ್ ಗಳಿಂದ ವಿದ್ಯುತ್ ಪಡೆದುಕೊಳ್ಳುತ್ತಿದ್ದೇವೆ.

ಸಿಎಂ ಸಿದ್ದರಾಮಯ್ಯ ಅವರು ನಮಗೂ ತುಂಬಾ ಸಪೊರ್ಟ್ ಆಗಿ ನಿಂತಿದ್ದಾರೆ.7 ಗಂಟೆಗಳ ಕಾಲ ವಿದ್ಯುತ್ ಕೊಡುವ ಹಾಗೇ ಈಗಾಗಲೇ ಆದೇಶ ಆಗಿದೆ.ಜನವರಿ ವರೆಗೂ ವಿದ್ಯುತ್ ಗೆ ತೊಂದರೆ ಇಲ್ಲ.ಪೆಭ್ರವರಿ , ಮಾರ್ಚ್ ತಿಂಗಳಿಗೆ ಬೇಡಿಕೆ ಹೆಚ್ಚಾಗಬಹುದು .ಆ ದಿನಗಳಲ್ಲಿ ಯಾವ ರೀತಿ ಯಾಗಿ ನಿಭಾಯಿಸಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಕೆ.ಜೆ ಜಾರ್ಜ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಯೂನಿವರ್ಸಿಟಿ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ