ತ್ನಿಯನ್ನೇ ಪತಿ ಕೊಲೆ ಮಾಡಿದ್ದ ಕೇಸ್.ಅರ್ಧಾಂಗಿಯನ್ನ ಕೊಂದ ಆಸಾಮಿ ಬಾಂಗ್ಲಾ ಗಡಿ ದಾಟಲು ಮುಂದಾಗಿದ್ದ.ಮಾಡಿದ್ದ ಪಾಪ ಎಲ್ಲಿ ಬಿಡತ್ತೆ ಹೇಳಿ.ಕೊನೆಗೂ ಪೊಲೀಸರು ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ.ಕರೆತಂದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳೊ ಸಂಗತಿ ಗೊತ್ತಾಗಿದೆ.ಸಿಸಿಟಿವಿ ದೃಶ್ಯ ನೋಡಿ.ನಿಂತ ಕಾರ್ ನಲ್ಲಿ ಲಗ್ಗೆಜ್ ತುಂಬಿದ ಆಸಾಮಿ ಊರು ಬಿಟ್ಟಿದ್ದ.ಹೀಗೆ ಹೊರಟವನು ದೆಹಲಿ ಮೂಲಕ ಪಶ್ಚಿಮ ಬಂಗಾಳದ ಸಿಲಿಗುರಿ ತಲುಪಿ ಬಾಂಗ್ಲಾ ಪ್ರವೇಶಿಸಲು ಮುಂದಾಗಿದ್ದ.ಅಷ್ಟರಲ್ಲಾಗಲೇ ಇಸ್ಲಾಂಪುರ ಬಳಿ ಖಾಕಿ ಬಲೆಗೆ ಬಿದ್ದಿದ್ದಾನೆ.ಹೀಗೆ ಹೊರಟವನು ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಕೊಲೆಯೊಂದನ್ನ ಮಾಡಿ ಪರಾರಿಯಾಗಲು ಯತ್ನಿಸಿದ್ದ.ನಾಸಿರ್ ಹೊಸೈನ್ ಜನವರಿ 16 ರಂದು ಸುದ್ದಗುಂಟೆಪಾಳ್ಯದಲ್ಲಿ ಪತ್ನಿ ಶೀಲ ಶಂಕಿಸಿ ನಾಝ್ ಎಂಬಾಕೆಯನ್ನ ಕೊಂದು ಪರಾರಿಯಾಗಿದ್ದ.ಹೀಗೆ ಬೆಂಗಳೂರು ಬಿಟ್ಟವನು ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ.ಆದ್ರೆ ಆರೋಪಿ ಬೆನ್ನುಬಿದ್ದ ಸುದ್ದಗುಂಟೆಪಾಳ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಪಶ್ಚಿಮ ಬಂಗಾಳದ ಇಸ್ಲಾಂಪುರ ಎಂಬಲ್ಲಿ ಸೆರೆಸಿಕ್ಕಿದ್ದ ಆತನನ್ನ ಕರೆತಂದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳೊ ವಿಚಾರಗಳೆ ಹೊರಬಿದ್ದಿದೆ.
ಹೊಸೈನ್ ಮೂಲತಃ ಬಾಂಗ್ಲಾದೇಶದವನು.ಪಶ್ಚಿಮಬಂಗಾಳದ ಸಿಲಿಗುರಿ ಮೂಲಕ ಕೊಲ್ಕತ್ತಾಗೆ ಪ್ರವೇಶ ಪಡೆದಿದ್ದ ಆರೋಪಿ ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಕೆಲಸ ಶುರು ಮಾಡಿದ್ದ.ಮುಂಬೈ,ದೆಹಲಿ ಸೇರಿದಂತೆ ಗುರ್ಗಾಂವ್ ನಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ಹೊಂದಿದ್ದ.ನಂತರ 2019 ರಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.ಇಲ್ಲಿ 75 ಸಾವಿರ ಸಂಬಳವನ್ನು ಪಡಿಯುತ್ತಿದ್ದ.ಈ ವೇಳೆ ತಾನು ವಾಸವಿದ್ದ ಮನೆ ಪಕ್ಕದಲ್ಲೇ ಇದ್ದ ನಾಝ್ ಪರಿಚಯವಾಗಿ ಪ್ರೇಮಾಂಕುರವಾಗಿದೆ.ನಂತರ ತನ್ನ ಮಾಹಿತಿ ಬಚ್ಚಿಟ್ಟು ಆರು ತಿಂಗಳ ಹಿಂದೆ ಆಕೆಯೊಂದಿಗೆ ವಿವಾಹವಾಗಿದ್ದ .ಶೀಲಶಂಕಿಸಿ ಕೊಲೆ ಮಾಡಿದ್ದಾಗಿ ಗೊತ್ತಾಗಿದೆ.ಪತ್ನಿ ನಾಝ್ ಕೊಲೆ ಮಾಡಿದ್ದ ಆರೋಪಿ ಹೊಸೈನ್.ಬೆಂಗಳೂರಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ.ಅಲ್ಲಿಂದ ಪಶ್ಚಿಮ ಬಂಗಾಳದ ಸಿಲಿಗುರಿಗೆ ಹೊರಟಿದ್ದ.ಪಶ್ಚಿಮ ಬಂಗಾಳ ಪೊಲೀಸರ ಸಹಾಯದೊಂದಿಗೆ,ಸಿಲಿಗುರಿ ಸಮೀದ ಇಸ್ಲಾಂಪುರ್ ಜಿಲ್ಲೆಯಲ್ಲಿ ಖಾಕಿ ಖೆಡ್ಡಗೆ ಬಿದ್ದಿದ್ದಾನೆ.ಇನ್ನೂ ಈ ಆರೋಪಿ ಪೊಲೀಸರ ದಿಕ್ಕು ತಪ್ಪಿಸಲು ಆಡಿದ್ದ ಆಟ ಅಷ್ಟಿಷ್ಟಲ್ಲ.ತನ್ನದೇ ಹೆಸರಿನಲ್ಲಿ ಎರಡೆರಡು ವಿಮಾನದ ಟಿಕೆಟ್ ಬುಕ್ ಮಾಡಿದ್ದ.ಎರಡೆರಡು ಓಯೋ ರೂಂ ಬುಕ್ ಮಾಡ್ತಿದ್ದ ಆರೋಪಿ ಹೊಸೈನ್.ಒಂದು ಕಡೆ ಚೆಕ್ ಇನ್ ಮಾಡಿ ಮತ್ತೊಂದು ಕಡೆ ತೆರಳಿ ವಾಸ್ತವ್ಯ ಹೂಡುತ್ತಿದ್ದ.ಆಗಾಗ ಮೊಬೈಲ್ ಆನ್ ಮಾಡಿ ಆಫ್ ಮಾಡ್ತಿದ್ದ .ನಂತರ ಕ್ಷಣಾರ್ಧದಲ್ಲಿ ಬೇರೆ ಕಡೆಗೆ ಹೊರಟು ಹೋಗ್ತಿದ್ದ.ಪೊಲೀಸರು ರೀಚ್ ಆಗೋದರೊಳಗೆ ಪೊಲೀಸರುಬತಲುಪೊ ವೇಳೆಗೆ ಒಂದೂವರೆ ಗಂಟೆ ಮುಂದೆ ಸಾಗ್ತಿದ್ದ.ಆದರೆ ಪೊಲೀಸರ ಬುದ್ಧಿವಂತೆಕೆ ಮಧ್ಯೆ ಈತನ ಜಾಣತನ ವರ್ಕ್ ಆಗಲೇ ಇಲ್ಲ.ಪಶ್ಚಿಮ ಬಂಗಾಳದ ಏಳು ಜನ ಎಸ್ ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಆರೋಪಿ ಹೆಡೆಮುರಿ ಕಟ್ಟಿದ್ದಾರೆ.
ಇನ್ನೂ ಈ ಹೊಸೈನ್ ಹೊಸೈನ್ ಢಾಕದಲ್ಲಿ ಹಾರ್ಡ್ ವೇರ್ ಇಂಜಿನಿಯರ್ ತರಬೇತಿ ಪಡೆದಿದ್ದ.ಆದರೆ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಲಿಲ್ಲ.ಲ್ಯಾಪ್ಟಾಪ್,ಮೊಬೈಲ್ ರಿಪೇರಿ ಮಾಡೋದ್ರಲ್ಲಿ ಪರಿಣಿತಿ ಹೊಂದಿದ್ದ.ಆ್ಯಪಲ್ ಕಂಪನಿಯ ಸಿಸ್ಟಂ,ಲ್ಯಾಪ್ಟಾಪ್ ರಿಪೇರಿ ಮಾಡೋದರಲ್ಲಿ ಪಂಟರ್ ಆಗಿದ್ದ.ಇದೇ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದಿದ್ರೆ ಒಳ್ಳೆ ಭವಿಷ್ಯ ಇರ್ತಿತ್ತು.ಆದರೆ ದುಡುಕಿನ ನಿರ್ಧಾರ ಒಂದು ಜೀವ ತೆಗೆದ್ರೆ.ಈತನ ಬದುಕು ಹಾಳಾಗುವಂತಾಗಿದೆ