Select Your Language

Notifications

webdunia
webdunia
webdunia
webdunia

25 ಲಕ್ಷದ ಜೊತೆಗೆ ಬೆಂಗಳೂರಿಗೆ ಆಗಮನ..ಸ್ನೇಹಿತರಿಂದಲೇ ಕಿಡ್ನಾಪ್..!

25 ಲಕ್ಷದ ಜೊತೆಗೆ ಬೆಂಗಳೂರಿಗೆ ಆಗಮನ..ಸ್ನೇಹಿತರಿಂದಲೇ ಕಿಡ್ನಾಪ್..!
bangalore , ಶುಕ್ರವಾರ, 18 ಆಗಸ್ಟ್ 2023 (20:34 IST)
ಬೆಂಗಳೂರು ರಸ್ತೆ ಬದಿಯಲ್ಲಿ ಟೀ ವ್ಯಾಪಾರ ಮಾಡಿಕೊಂಡಿದ್ದ ತಿಲಕ್ ಮಣಿಕಂಠ ಎಂಬಾತನಿಗೆ ಸ್ವಲ್ಪ ಜೂಜಾಟ ಆಡೊ ಹುಚ್ಚು.ಹಾಗಾಗಿ ಐದು ಲಕ್ಷ ಹಣ ತಗೊಂಡು ಆಗಸ್ಟ್ 1 ರಂದು ಸೀದಾ ಗೋವಾ ಕೆಸಿನೊಗೆ ತೆರಳಿದ್ದ.ಆತನಿಗೆ ಅಲ್ಲಿ ಅದೃಷ್ಟ ಖುಲಾಯಿಸಿಬಿಟ್ಟಿತ್ತು..25 ಲಕ್ಷ ಗೆದ್ದು ಬೆಂಗಳೂರಿಗೆ ಬಂದಿದ್ದ.ಇನ್ನೇನು ಲೈಫ್ ಸೂಪರ್ ಗುರೂ ಅಂದುಕೊಂಡವನು ಖುಷಿಯನ್ನ ಎಲ್ಲರ ಜೊತೆಗೆ ಹಂಚಿಕೊಳ್ಳಬೇಕಲ್ವಾ..! ಹಾಗಾಗಿ ಗೆದ್ದ ವಿಚಾರವನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ.ಇದನ್ನ ನೋಡಿದ ಗೆಳೆಯರು ಮಗ ಸ್ವಲ್ಪ‌ಹಣ ಕೊಡೊ ಎಂದಿದ್ದಾರೆ.ಆದ್ರೆ ಇದಕ್ಕೆ ಸೊಪ್ಪು ಹಾಕದ ತಿಲಕ್ ನಿರಾಕರಿಸಿದ್ದ ಹಾಗಾಗಿ ಏನಾದ್ರು ಮಾಡ್ಲೇಬೇಕು ಅಂತಾ ಆಗಸ್ಟ್ 5 ರ ಸಂಜೆ ಜೊತೆಯಾದ ಬನಶಂಕರಿ ಪೊಲೀಸ್ ಠಾಣೆ ರೌಡಿಶೀಟರ್ ಕಾರ್ತಿಕ್ @ ಸೈಕೊ ,ವಿವಿ ಪುರಂ ಪೊಲೀಸ್ ಠಾಣೆ ರೌಡಿಶೀಟರ್ ರಾಹುಲ್ @ ಪಾಂಡು,ಮನೋಜ್ ಕುಮಾರ್,ಈಶ್ವರ್,ರಾಮ್ ಕುಮಾರ್,ಮೋಹನ್ ನಿಶ್ಚಲ್ ಗೌಡ,ವರುಣ್ ತಿಲಕ್ ನನ್ನ ಹನುಮಂತನಗರದ ದತ್ತಾತ್ರೇಯ ಬಡಾವಣೆ ಸಮೀಪದ ಕಾಂಡಿಮೆಂಟ್ಸ್ ಅಂಗಡಿ ಬಳಿ ಕರೆಸಿಕೊಂಡಿದ್ದಾರೆ.

ಅಲ್ಲಿಂದ 8 ಜನ ಸೇರಿ ತಿಲಕ್ ನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ್ರು.ನಂತರ ಸೀದಾ ಜ್ಙಾನಭಾರತಿ ಕ್ಯಾಂಪಸ್ ನಲ್ಲಿ ಲಾಕ್ ಮಾಡಿ ಕೂರಿಸಿಕೊಂಡಿದ್ದಾರೆ. ಬಳಿಕ 5 ಲಕ್ಷ ಹಣ ಆನ್ ಲೈನ್ ಮೂಲಕ ಟ್ರಾನ್ಸ್ಫರ್ ಮಾಡಿಕೊಂಡಿದ್ರು.ಇನ್ನೂ ಅಕೌಂಟ್ ನಲ್ಲಿ ಹಣ ಇರೊ ವಿಚಾರ ಗೊತ್ತಾಗಿ ಬೆಂಗಳೂರು ಹೊರವಲಯದ ನೆಲಮಂಗಲ‌ ಸಮೀಪದ ಸ್ನೇಹಿತನ ರೆಸಾರ್ಟ್ ಗೆ ಕರೆದೊಯ್ದು ಮತ್ತೆ 10 ಲಕ್ಷ  ಅಂದ್ರೆ ಒಟ್ಟು 15 ಲಕ್ಷ ವರ್ಗಾವಣೆ ಮಾಡಿಕೊಂಡು 6 ರ ಮುಂಜಾನೆ ಮಾದವರ ಬಳಿ ಬಿಟ್ಟು ಹೋಗಿದ್ರು.ನಂತರ ಬಂದು ತಿಲಕ್ ಘಟನೆ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.ಎಫ್ಐಆರ್ ದಾಖಲಿಸಿಕೊಂಡ ಹನುಮಂತನಗರ ಪೊಲೀಸರು ಶಿರಣಿಯಲ್ಲಿ ತಲೆ ಮರೆಸಿಕೊಂಡಿದ್ದ ಎಂಟು ಜನ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.

ಇನ್ನೂ ಆರೋಪಿಗಳು 15 ಲಕ್ಷದ ಜೊತೆಗೆ ಪರಾರಿ ಆಗಿದ್ದೇ ರೋಚಕ.ಕಾರ್ ಬಿಟ್ಟು ಟ್ರೈನ್ ಹತ್ತಿದ ಆರೋಪಿಗಳು ನೊದಲು ಗೋವಾಗೆ ತೆರಳಿ ಮೋಜು ,ಮಸ್ತಿ ಮಾಡಿದ್ದಾರೆ.ನಂತರ ಮುಂಬೈನಲ್ಲಿ ಸುತ್ತಾಡಿ ಶಿರಡಿಗೆ ತೆರಳಿ ಸಾಯಿಬಾಬ ದರ್ಶನ ಪಡೆದು ತಲೆ ಮರೆಸಿಕೊಂಡಿದ್ರು.ಮಾಹಿತಿ ಕಲೆ ಹಾಕಿದ ಹನುಮಂತನಗರ ಠಾಣೆ ಪೊಲೀಸರು ಎಂಟು ಜನ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ