Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಕಾಂತರ ಕಿಚ್ಚ ಫುಲ್ ಫಿದಾ..!!

ರಿಷಬ್ ಶೆಟ್ಟಿ ಕಾಂತರ ಕಿಚ್ಚ ಫುಲ್ ಫಿದಾ..!!
ಬೆಂಗಳೂರು , ಭಾನುವಾರ, 9 ಅಕ್ಟೋಬರ್ 2022 (14:55 IST)
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ವಿಶ್ವದೆಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಿಡುಗಡೆಯಾಗಿ ಹತ್ತು ದಿನದ ಬಳಿಕವು ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪರಭಾಷೆಯಲ್ಲೂ ಕನ್ನಡ ಸಿನಿಮಾ ಕಾಂತಾರಕ್ಕೆ ಜೈಕಾರ ಹಾಕುತ್ತಿದ್ದಾರೆ.
ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.
 
ಉತ್ತಮ ಚಿತ್ರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ಕಿಚ್ಚ ಸುದೀಪ್ ಇದೀಗ ಕಾಂತಾರ ಚಿತ್ರ ನೋಡಿ ಟ್ವೀಟ್ ಮಾಡಿದ್ದಾರೆ. ಚಿತ್ರದ ನೋಡಿದ ಸಂತಸದಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಸುದೀಪ್ ಟ್ವೀಟ್ ಮಾಡಿದ ಪತ್ರದ ಸಾಲುಗಳು ಇಲ್ಲಿದೆ.
 
"ನಾವು ಚೆನ್ನಾಗಿರುವ ಮತ್ತು ಅದ್ಭುತ ಎನಿಸುವ ಸಿನಿಮಾಗಳನ್ನು ನೋಡುತ್ತೇವೆ. ಆದರೆ ಅಪರೂಪಕ್ಕೆ ಮಾತ್ರ ನಮ್ಮನ್ನು ಮಂತ್ರಮುಗ್ಧಗೊಳಿಸುವ ಸಿನಿಮಾ ಬರುತ್ತವೆ. ಅಂತಹ ಒಂದು ಸಿನಿಮಾವಾಗಿರುವ ಕಾಂತಾರ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಸಿಂಪಲ್ ಪ್ಲಾಟ್, ಅಸಾಧಾರಣ ರೀತಿಯ ಬರವಣಿಗೆ, ಫೆಂಟಾಸ್ಟಿಕ್ ಎನ್ನವಂತಹ ಕಲ್ಪನೆ. ರಿಷಬ್ ಅತ್ಯುತ್ತಮವಾಗಿ ನಟಿಸಿದ್ದು ಸಂಪೂರ್ಣ ಶ್ರಮ ಹಾಕಿದ್ದಾರೆ. ಯಾರಾದರೂ ಈ ರೀತಿಯಾಗಿ ಹೇಗೆ ಯೋಚಿಸಲು ಸಾಧ್ಯ ಎಂದು ಅಚ್ಚರಿ ಪಡುವುದಷ್ಟೇ ನಿಮ್ಮ ಕೆಲಸ.
 
ಪರದೆ ಮೇಲೆ ತೋರಿಸಿದ ರೀತಿಯ ಅರ್ಧದಷ್ಟಾದರೂ ಈ ಪ್ಲಾಟ್ ಪೇಪರ್ ಮೇಲಿದ್ದರೂ ಅದು ಅಚ್ಚರಿ. ಕ್ಲೈಮ್ಯಾಕ್ಸ್ ಪೇಪರ್​​ನಲ್ಲಿ ಕೂಡಾ ಪೇಪರ್ ನಲ್ಲಿ ಅದೊಂದು ಸಾಮಾನ್ಯ ಎಂಡಿಂಗ್ ಆಗಿರುತ್ತಿತ್ತು. ಇದು ನಿರ್ದೇಶಕರ ದೃಷ್ಟಿ. ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ಸಿದ್ಧವಾಗಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಲಾ ಮತ್ತು ಉಬರ್ ಸ್ಥಗಿತ