ನಿನ್ನೆ ರಾಜ್ಯದಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್, ಧ್ವಜ ಹಿಡಿದು ಹೆಜ್ಜೆ ಹಾಕಿದ್ದ ಯುವಕನ ಮೇಲೆ FIR ದಾಖಲಾಗಿದೆ. ವಿಜಯಪುರ ಮೂಲದ ಅಕ್ಷಯ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಜೋಡೋ ಯಾತ್ರೆಯಲ್ಲಿ ಈತ ಪೇಸಿಎಂ ಎಂಬ ಟೀ ಶರ್ಟ್ ಹಾಗೂ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು, ಬಿಜೆಪಿ 40% ಸರ್ಕಾರ, ಯುವಕರಿಗೆ ಉದ್ಯೋಗ ಕೊಡದೆ ಬೀದಿಪಾಲು ಮಾಡುತ್ತಿದೆ. ಈ ಸರ್ಕಾರವನ್ನು ತೆಗೆದೇ ತೆಗೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ರು. ಗುಂಡ್ಲುಪೇಟೆ ಪುರಸಭಾ ಸದಸ್ಯ ಕಿರಣ್ ಗೌಡ ಹಾಗೂ ಸುರೇಶ್ ಎಂಬುವರು ಚಾಮರಾಜನಗರ ಸಿಇಎನ್ ಠಾಣೆಗೆ ದೂರು ನೀಡಿದ್ದು, ರಾಜ್ಯದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವ ಈ ಯುವಕನನ್ನು ಶೀಘ್ರದಲ್ಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಯುವಕನ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.