Publish Date: Sat, 01 Oct 2022 (16:54 IST)
Updated Date: Sat, 01 Oct 2022 (17:01 IST)
ತೈಲ ವಿತರಣಾ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ದರದಲ್ಲಿ ತುಸು ಇಳಿಕೆ ಮಾಡಿವೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 25.50 ರೂಪಾಯಿ ಇಳಿಸಿವೆ. ಇದು ಬೆಲೆ ಏರಿಕೆಯ ಬಿಸಿ ನಡುವೆ ದರ ಇಳಿಸಿರುವುದು ತುಸು ಸಮಾಧಾನ ತಂದಿದೆ. ಅಕ್ಟೋಬರ್ 1ರಿಂದ ಮಹಾನಗರಗಳಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ತೈಲ ವಿತರಣಾ ಕಂಪನಿಗಳು ಕಡಿತಗೊಳಿಸಿವೆ. ಲಿಮಿಟೆಡ್ ಪ್ರಕಾರ, LPG ಸಿಲಿಂಡರ್‌ನ ಬೆಲೆ ಪ್ರತಿ ಯೂನಿಟ್‌ಗೆ 25.50 ರೂ.ವರೆಗೆ ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಕಳೆದ ತಿಂಗಳ ಮೊದಲ ದಿನ ಕೂಡ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿತ್ತು. 2 ತಿಂಗಳಲ್ಲಿ 2ನೇ ಬಾರಿಗೆ ದರ ಇಳಿಕೆ ಕಾಣುತ್ತಿರುವುದು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ತಿನಿಸಿನ ದರದಲ್ಲೂ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ.