Select Your Language

Notifications

webdunia
webdunia
webdunia
webdunia

5ಜಿ ಇಂಟರ್​ನೆಟ್​ ಸೇವೆಗೆ ಮೋದಿ ಚಾಲನೆ

5ಜಿ ಇಂಟರ್​ನೆಟ್​ ಸೇವೆಗೆ ಮೋದಿ ಚಾಲನೆ.Modi launched 5G internet service
bangalore , ಶನಿವಾರ, 1 ಅಕ್ಟೋಬರ್ 2022 (16:40 IST)
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 5ಜಿ ಇಂಟರ್​ನೆಟ್​ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ್ರು. ಇದು ದೇಶದ ಅಂತರ್ಜಾಲ ಸೇವೆಯಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಮೊದಲ ಹಂತವಾಗಿ 5ಜಿ ದೂರಸಂಪರ್ಕ ಸೇವೆಯನ್ನು ಕೆಲ ಆಯ್ದ ನಗರಗಳಲ್ಲಿ ಮಾತ್ರ ಚಾಲನೆ ಸಿಗಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ಈ ಮೂಲಕ ದೇಶ ಹೊಸ ಮಜಲಿಗೆ ತಿರುಗಲಿದೆ. 5ಜಿ ಎಂಬುದು 5ನೇ ಪೀಳಿಗೆಯ ಮೊಬೈಲ್​ ನೆಟ್​ವರ್ಕ್​ ಆಗಿದೆ. 4ಜಿಗಿಂತಲೂ 20 ಪಟ್ಟು ಹೆಚ್ಚು ವೇಗದ ಇಂಟರ್​ನೆಟ್ ಅ​​ನ್ನು​ ಇದು ಒದಗಿಸುತ್ತದೆ. ಈ ಸುಧಾರಿತ ನೆಟ್​ವರ್ಕ್​ ಬಳಕೆದಾರರಿಗೆ ವಿಳಂಬ ಮುಕ್ತ ಸಂಪರ್ಕವನ್ನು ನೀಡುತ್ತದೆ. ಇಂದು ಪ್ರಧಾನಿ ಮೋದಿ ಅವರು ದೇಶದ ವಿವಿಧ 13 ನಗರಗಳಲ್ಲಿ ಅತಿವೇಗದ ಅಂತರ್ಜಾಲ ಸೇವೆಗೆ ಚಾಲನೆ ನೀಡಿದ್ದು, ಈಗಾಗಲೇ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 5ಜಿ ಸೇವೆ ಆರಂಭಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ವಿಸ್ತರಣೆ ಕಂಡು ದೇಶದ ಎಲ್ಲಾ ನಗರಗಳಿಗೂ 5ಜಿ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಿ ಪರೀಕ್ಷೆ ಮುಂದೂಡಿಕೆ , ಮಹಾ ಎಡವಟ್ಟು