Select Your Language

Notifications

webdunia
webdunia
webdunia
webdunia

ಹನುಮಂತನಗರ ಪೊಲೀಸರಿಂದ ಖತರ್ನಾಕ್ 'ಚಡ್ಡಿ'ಗ್ಯಾಂಗ್ ಬಂಧನ

ಹನುಮಂತನಗರ ಪೊಲೀಸರಿಂದ ಖತರ್ನಾಕ್ 'ಚಡ್ಡಿ'ಗ್ಯಾಂಗ್ ಬಂಧನ
bangalore , ಶುಕ್ರವಾರ, 20 ಜನವರಿ 2023 (20:53 IST)
ನಟೋರಿಯಸ್ ಚಡ್ಡಿ ಗ್ಯಾಂಗ್.ಚಡ್ಡಿ ಹಾಕಿಕೊಂಡು ಆ್ಯಕ್ಟಿವಾ ಬೈಕ್ ನಲ್ಲಿ ಹೊರಟ್ರೆ ಮುಗಿತು.ಅಫೆನ್ಸ್ ಮಾಡದೇ ಬರ್ತಿರ್ಲಿಲ್ಲ.ಹೀಗೆ ಕ್ಲೂ ಬಿಡದೇ ಮಹಿಳೆಯಿಂದ ಚಿನ್ನದ ಸರ ಕಿತ್ತುಕೊಂಡು ಹೋದವರನ್ನ ಖಾಕಿ ಬೇಟೆಯಾಡಿದೆ.ಚಡ್ಡಿ ಹಾಕಿಕೊಂಡು ಆ್ಯಕ್ಟಿವಾ ಬೈಕ್‌ನಲ್ಲಿ ಹೋಗ್ತಿದ್ದ ಮುಸುಡಿಗಳು ಇವರದ್ದೇ ನೋಡಿ.ಸುನೀಲ್ ಅಲಿಯಾಸ್ ಸ್ನ್ಯಾಚ್ ಸುನೀಲ ಮತ್ತು ಶ್ರೀನಿವಾಸ್ ಅಲಿಯಾಸ್ ಚಡ್ಡಿ.ಈ ಆಸಾಮಿಗಳು ಇಡೀ ಬೆಂಗಳೂರೇ ಬೆಚ್ಚಿ ಬೀಳುವಂತೆ ಮಾಡಿತ್ತು.2008 ರಿಂದ 2016 ರ ವರೆಗೂ ರಾಬರಿ ಕೇಸ್ ಮೇಲೆ ೮ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸುನೀಲ ಹೊರಬಂದು ಮತ್ತದೇ ಚಾಳಿ ಮುಂದುವರೆಸಿದ್ದಾನೆ.ಇನ್ನೂ ಈ ಶ್ರೀನಿವಾಸ ಏನು ಸಾಮಾನ್ಯದವನಲ್ಲ.ಆತನು ಜೈಲಿನಲ್ಲಿ ಮುದ್ದೆ ಮುರಿದು ಹೊರಬಂದಿದ್ದ.ಮತ್ತೆ ಆ್ಯಕ್ಟಿವ್ ಆಗಿ ಪರಪ್ಪನ ಅಗ್ರಹಾರ ಸೇರಿದ್ದಾನೆ.
ಮಾಸ್ಕ್ ಮತ್ತು ಟೋಪಿ ಹಾಕಿಕೊಂಡು ಫೀಲ್ಡಿಗೆ ಇಳಿದಿದ್ದ ಇದೇ ಸುನೀಲ್ ಮತ್ತು ಶ್ರೀನಿವಾಸ್ ಜನವರಿ ನಾಲ್ಕರ ಮಧ್ಯಾಹ್ನ ಕೈಚಳಕ ತೋರಿದ್ರು.ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕನಗರ ಐದನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ 56 ವರ್ಷದ ಶಿಕ್ಷಕಿ ಕತ್ತಿನಿಂದ 30 ಗ್ರಾಂ‌ ಚಿನ್ನದ ಸರವನ್ನ ಕಿತ್ತು ಪರಾರಿಯಾಗಿದ್ರು.ಆದ್ರೆ ಒಂದೇ ಒಂದು ಕ್ಲೂ ಕೂಡ ಬಿಟ್ಟುಹೋಗಿರಲಿಲ್ಲ.ಶತಾಯ ಗತಾಯ ಆರೋಪಿ ಪತ್ತೆ ಮಾಡಲೇಬೇಕೆಂದು ಪಣತೊಟ್ಟಿದ್ದ ಹನುಂಮತನಗರ ಪೊಲೀಸರು ಸುಮಾರು 150 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿದ್ರು.ಅಲ್ಲಿ ಸುನೀಲ್ ಬೈಕ್ ಓಡಿಸ್ತಿದ್ರೆ ಸುನೀಲ ಚೈನ್ ಸ್ನ್ಯಾಚ್ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.ಅದೇ ಕ್ಲೂ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ.ಮತ್ತು 10 ಬೈಕ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.

ಇದೇ ಸುನೀಲನ‌ ಮತ್ತು ಶ್ರೀನಿವಾಸ ಬೆಂಗಳೂರಿನ ನಾಯಂಡಹಳ್ಳಿ ಮೂಲದವ್ರು.2008 ರಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರಾಬರಿ ಕೇಸ್ ನಲ್ಲಿ 8 ವರ್ಷ ಜೈಲಿನಲ್ಲಿದ್ದು 2016 ರಲ್ಲಿ ಬಿಡುಗಡೆಯಾಗಿದ್ದ.ಇನ್ನೂ ಶ್ರೀನಿವಾಸ ಕೂಡ ಅಪರಾಧ ಕೃತ್ಯದ ಹಿನ್ನಲೆ ಹೊಂದಿದ್ದಾನೆ.ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರೊ ಹನುಮಂತನಗರ ಠಾಣೆ ಪೊಲೀಸರು,ಬಂಧಿತರಿಂದ ಒಂದೂವರೆ ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ ವಶಕ್ಕೆ12 ಬೈಕ್ ಗಳನ್ನು ವಶಕ್ಕೆ ಪಡೆದಿದ್ದು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮರಗಳ ಸ್ಥಳಾಂತರಕ್ಕೆ ಖಾಸಗಿ ಸಂಸ್ಥೆ ನೇಮಕ