Select Your Language

Notifications

webdunia
webdunia
webdunia
webdunia

ಬೈಕ್ ಆ್ಯಕ್ಸಿಡೆಂಟ್ ಡ್ರಾಮ..ಮಟ ಮಟ ಮಧ್ಯಾಹ್ನವೇ ರಾಬರಿ

ಬೈಕ್ ಆ್ಯಕ್ಸಿಡೆಂಟ್ ಡ್ರಾಮ..ಮಟ ಮಟ ಮಧ್ಯಾಹ್ನವೇ ರಾಬರಿ
bangalore , ಶುಕ್ರವಾರ, 20 ಜನವರಿ 2023 (20:33 IST)
ಅಲ್ಲೊಂದು ಆ್ಯಕ್ಸಿಡೆಂಟ್ ಆಗಿತ್ತು.ಅಪಘಾತದ ಬಳಿಕ ಸೆಟ್ಲ್ ಮೆಂಟ್ ಬಗ್ಗೆ ಮಾತುಕತೆ ನಡಿತಾ ಇತ್ತು.ಇದ್ದಕ್ಕಿದ್ದಂತೆ ಕಂತೆ ಕಂತೆ ಹಣ ಇದ್ದ ಬ್ಯಾಗ್ ಅನ್ನ ಅಲ್ಲಿದ್ದ ನಾಲ್ವರು ಕಿತ್ತು ಪರಾರಿಯಾಗಿದ್ರು.ದೂರು ಕೊಟ್ಟಿದ್ದು 10 ಲಕ್ಷ ರಾಬರಿ ಆಗಿದೆ ಅಂತಾ ಆದರೆ ದರೋಡೆಕೋರರ ಬಳಿ ಸಿಕ್ಕಿದ್ದು ಬರೋಬ್ಬರಿ 62 ಲಕ್ಷ.ಮತ್ತೊಂದು ಕಡೆ ನಂಬಿಕೆ ಇಟ್ಟು 10 ಲಕ್ಷ ಮತ್ತೊಬ್ಬರಿಗೆ ನೀಡಿ ಬರುವಂತೆ ವ್ಯಕ್ತಿ ಕೈಗೆ ಕೊಟ್ಟು ಕಳುಹಿಸಲಾಗಿತ್ತು.10 ಲಕ್ಷ ತಾನೆ ಹೊಡೆಯಲು ಸ್ಕೆಚ್ ಹಾಕಿಕೊಂಡಿದ್ದ ಆಸಾಮಿ ರಾಬರಿ ಕಥೆಕಟ್ಟಿ ಕೊನೆಗೂ ಲಾಕ್ ಆಗಿದ್ದಾನೆ.ಮನಿ..ಮನಿ..ಮನಿ..ಕಮಿಷನರ್ ಕಚೇರಿ ತುಂಬೆಲ್ಲ ಬರೀ ಝಣ ಝಣ ಕಾಂಚಾಣ..ನಾವು ಕಳೆದ ಕೆಲ ದಿನಗಳ ಹಿಂದೆ ತೋರಿಸಿದಂತೆ ನಕಲಿ ನೋಟ್ ಅಲ್ವೇ ಅಲ್ಲ.ಎಲ್ಲವೂ ಅಸಲಿ ನೋಟು..ಐನೂರು ರೂಪಾಯಿ ಮೌಲ್ಯದ ಗರಿ ಗರಿ ಗಾಂಧಿ ನೋಟು..ಇಷ್ಟೆಲ್ಲ ಹಣವನ್ನು ಇವತ್ತು ಕಮಿಷನರ್ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಡೋದಕ್ಕೂ ಒಂದು ಕಾರಣ ಇದೆ
ನವರಿ 10 ರ ಮಧ್ಯಾಹ್ನ 3 ಗಂಟೆಯ ಸಮಯ.ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಲಾ ರಸ್ತೆ.ಚಿನ್ನ ಖರೀದಿದಾರರಿಂದ ಹಣ ಕಲೆಕ್ಟ್ ಮಾಡಿಕೊಂಡು ಹೋಗ್ತಿದ್ದ ಕೃಷ್ಣಪ್ಪ ಮತ್ತು ಅರುಣ್ ಇದ್ದ ಬೈಕ್ ಗೆ ಜಿಲಾನಿ,ಅಬ್ದುಲ್ ವಹಾಬ್ ಪ್ಲಾನ್ ನಂತೆ ತಮ್ಮ ಬೈಕ್ ಮೂಲಕ ಡಿಕ್ಕಿ ಹೊಡೆದಿದ್ರು.ಅಲ್ಲಿಗೆ ಸೆಟ್ಲ್ ಮೆಂಟ್ ಮಾತುಕತೆ ನಡಿತಿರಬೇಕಾದ್ರೆ ಬಂದ ಪೃಥ್ವಿಕ್ ಮತ್ತು ಮತ್ತೋರ್ವ ಆರೋಪಿಯು ಕೃಷ್ಣಪ್ಪ ಮತ್ತು ಅರುಣ್ ಸಿಂಗ್ ಬಳಿಯಿದ್ದ ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ದಾರೆ.ತಕ್ಷಣ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಆಗಮಿಸಿದ ಅರುಣ್ ಸಿಂಗ್ 10 ಲಕ್ಷ ರಾಬರಿಯಾಗಿದೆ ಅಂತಾ ದೂರು ನೀಡಿದ್ದ.ತನಿಖೆಗೆ ಇಳಿದ ಪೊಲೀಸರು 
ಜಿಲಾನಿ,ಅಬ್ದುಲ್ ವಹಾಬ್@ಕಮ್ಮರ್,ಪೃಥ್ವಿಕ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದು ಬಂಧಿತರಿಂದ 62 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ. ದೂರು ದಾಖಲಿಸಿದ್ದು 10 ಲಕ್ಷ ರಾಬರಿಯಾಗಿದೆ ಅಂತಾ.62 ಲಕ್ಷ ರಿಕವರಿ ಬಗ್ಗೆ ಅರುಣ್ ನನ್ನ ಪ್ರಶ್ನಿಸಿದಾಗ ಬ್ಯಾಗ್ ನಲ್ಲಿ ಒಟ್ಟು 85 ಲಕ್ಷ ಹಣ ಇತ್ತು ಎಂದು ಹೇಳಿದ್ದು.ಆ ಹಣ ಎಲ್ಲಿಂದ ಬಂತು ಅನ್ನೋ ತನಿಖೆಯನ್ನ ಕಲಾಸಿಪಾಳ್ಯ ಠಾಣೆ ಪೊಲೀಸರು ಮುಂದುವರೆಸಿದ್ದಾರೆ.

ಜನವರಿ 13 ರ ರಾತ್ರಿ 8 ಗಂಟೆ ವೇಳೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ ಮೂಲರಾಮ್ ಎಂಬ ವ್ಯಕ್ತಿ ಸಿರ್ಸಿ ಸರ್ಕಲ್ ಬಳಿ 10 ಲಕ್ಷ ಹಣದ ಜೊತೆಗೆ ಹೋಗ್ತಿದ್ದಾಗ 4 ಜನ ಆಸಾಮಿಗಳು ಹಲ್ಲೆ ಮಾಡಿ ದುಡ್ಡು ಕಿತ್ತು ಪರಾರಿಯಾಗಿದ್ದಾರೆಂದು ದೂರು ನೀಡಿದ್ದ.ಅಲ್ಲದೇ ಕೈಮೇಲಿನ ಗಾಯವನ್ನು ತೋರಿಸಿದ್ದ.ತನಿಖೆಗೆ ಇಳಿದ ಪೊಲೀಸರಿಗೆ ಈತನ ಮೇಲೆಯೇ ಅನುಮಾನ ಮೂಡಿತ್ತು.ತಮ್ಮದ ರೀತಿಯಲ್ಲಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದ.ವಿಕ್ರಮ್ ಎಂಬಾತ ಬ್ಯುಸಿನೆಸ್ ಹಣವನ್ನು ಸ್ಯಾಟಲೈಟ್ ಬಳಿ ಇರುವ ಅಶೋಕ್ ಎಂಬುವರಿಗೆ ತಲುಪಿಸುವಂತೆ ಕೆಲಸಗಾರ ಮೂಲರಾಮ್ ಕೈಗೆ 10 ಲಕ್ಷ ಹಣ ಕೊಟ್ಟು ಕಳುಹಿಸಿದ್ದ.ಬ್ಯುಸಿನೆಸ್ ನಲ್ಲಿ ಲಾಸ್ ಆಗಿದ್ದ ಮೂಲರಾಮ್ ಗೆ ಹಣದ ಅವಶ್ಯಕತೆ ಇತ್ತು ಹಾಗಾಗಿ ೧೦ ಲಕ್ಷ ಹಣ ಲಪಟಾಯಿಸಲು ಹೊಂಚು ಹಾಕಿದ್ದ ದುಡ್ಡು ತನ್ನ ಮನೆಯಲ್ಲಿ ಬಚ್ಚಿಟ್ಟು ಬ್ಯಾಗ್ ಸಿರ್ಸಿ ಸರ್ಕಲ್ ಬಳಿಯ ಖಾಲಿ ಜಾಗದಲ್ಲಿ ಬಿಸಾಡಿ.ಬ್ಲೇಡ್ ನಿಂದ ಕೈಗೆ ಸಣ್ಣ ಪುಟ್ಟ ಗಾಯ ಮಾಡಿಕೊಂಡು ರಾಬರಿ ಕಥೆಕಟ್ಟಿದ್ದ‌‌.ಸದ್ಯ ಆರೋಪಿ ಮೂಲರಾಮ್ ಬಂಧಿಸಿರೊ ಚಾಮರಾಜಪೇಟೆ ಪೊಲೀಸರು ಆತನಿಂದ 10 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
 
 
ಏನೇ ಹೇಳಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರಲ್ಲಿ ರಾಬರಿ ಪ್ರಕರಣ ಹೆಚ್ಚಾಗ್ತಿದ್ರೆ.ರಾಬರಿ ಹೆಸರಲ್ಲಿ ಹಣ ಹೊಡೆಯೊ ಗ್ಯಾಂಗ್ ಕೂಡ ತಲೆಎತ್ತುತ್ತಿದೆ.ಅದಕ್ಕೆ ಈ ಎರಡು ಪ್ರಕರಣಗಳೇ ಸಾಕ್ಷಿಯಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ....!