Select Your Language

Notifications

webdunia
webdunia
webdunia
webdunia

ಕಾರು ಬಾನೆಟ್ ಮೇಲೆ ವ್ಯಕ್ತಿ ಎಳೆದೊಯ್ದ ಮಹಿಳೆಯ ಬಂಧನ

A woman dragged by a man on the bonnet of a car
bangalore , ಶುಕ್ರವಾರ, 20 ಜನವರಿ 2023 (19:32 IST)
ಸಿನಿಮೀಯ ಶೈಲಿಯಲ್ಲಿ ಚಲಿಸುವಾಗಲೇ ವ್ಯಕ್ತಿಯನ್ನ ಬಾನೆಟ್ ಮೇಲೆ ಕಾರು ಹತ್ತಿಸಿದ‌ ಪ್ರಕರಣ ಸಂಬಂಧ ಕಾರಿನ ಚಾಲಕಿ ಹಾಗೂ ಚಾಲಕಿ ಮೇಲೆ ಹಲ್ಲೆ‌ ನಡೆಸಿದ ಆರೋಪದಡಿ ಸ್ವಿಫ್ಟ್ ಕಾರಿನ ಚಾಲಕ ಸೇರಿ ಐವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ‌ ಸಂಬಂಧ ಜ್ಞಾನಭಾರತಿ‌ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.‌‌‌ ಮೊದಲ‌ ಪ್ರಕರಣದಲ್ಲಿ ಕಾರಿನ ಚಾಲಕಿ ಪ್ರಿಯಾಂಕ ಬಂಧಿಸಿದ್ದರೆ ಈಕೆಯ ಗಂಡ ಪ್ರಮೋದ್ ನೀಡಿದ ಪ್ರತಿ‌ದೂರಿನ ಮೇರೆಗೆ ಸ್ವಿಫ್ಟ್ ಕಾರಿನ ಚಾಲಕ ದರ್ಶನ್, ಸುಜನ್ , ಯಶವಂತ್ ಹಾಗೂ ವಿನಯ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌‌. ಘಟನೆಯಲ್ಲಿ ಪ್ರಿಯಾಂಕ ಕಾರು ಹಾನಿಗೊಳಗಾಗಿದೆ.  ಟಾಟಾ ನೆಕ್ಸಾನ್ ಹಾಗೂ ಸ್ವಿಫ್ಟ್ ಕಾರಿನಲ್ಲಿದ್ದ ಚಾಲಕರ ನಡುವೆ ಗಲಾಟೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿದ್ದವನು ಕೂಡ ಬೈದಿದ್ದಾನೆ‌. ಮಂಗಳೂರು ಕಾಲೇಜ್ ಬಳಿ ನೆಕ್ಸಾನ್ ಕಾರ್ ಅಡ್ಡಗಟ್ಟಿದ್ದಾರೆ ಈ ವೇಳೆ ದರ್ಶನ್ ತನ್ನ ಸ್ನೇಹಿತರನ್ನ ಕರೆಸಿಕೊಂಡಿದ್ದಾನೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ವೇಳೆ ಮಹಿಳೆ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆ. ಹಲ್ಲೆ‌‌ ಸಂಬಂಧ ದರ್ಶನ್ ಸ್ನೇಹಿತರು ಭಾಗಿಯಾಗಿದ್ದಾರೆ.‌‌ ಒಟ್ಟಾರೆ ಕೊಲೆ‌ಯತ್ನ ಆರೋಪದಡಿ ಕಾರಿನ ಚಾಲಕಿ ಪ್ರಿಯಾಂಕ, ಹಾಗೂ ಯುವತಿ ಮೇಲೆ ಹಲ್ಲೆ ನಡೆಸಿದ‌‌‌ ಆರೋಪ ಹಿನ್ನೆಲೆ ದರ್ಶನ್ ಹಾಗೂ ಆತನ ಸಹಚರನನ್ನ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
 
ದರ್ಶನ್ ಕೊಟ್ಟ ದೂರಿನಲ್ಲಿ ಏನಿದೆ ?
29 ವರ್ಷದ ದರ್ಶನ್ ನ್ಯಾಚುರಲ್ ಐಸ್ ಕ್ರೀಂ ಹಾಗೂ ಪೆಟ್ ಶಾಪ್ ಇಟ್ಟುಕೊಂಡಿದ್ದು ಇಂದು ಬೆಳಗ್ಗೆ ಉಲ್ಲಾಳದಲ್ಲಿ ಬರುವಾಗ ರೆಡ್ ಸಿಗ್ನಲ್ ವಿದ್ದರೂ ಕಾರು ಚಾಲನೆ‌ ಮಾಡುತ್ತಿದ್ದ ಪ್ರಿಯಾಂಕ ಅವರು ಕಾರನ್ನ ಅಡ್ಡ ನಿಲ್ಲಿಸಿದ್ದರು. ರೆಡ್  ಸಿಗ್ನಲ್ ಇರೋದು ನಿಮಗೆ ಕಾಣಿಸ್ತಿಲ್ವಾ ಅಂದೆ.. ಈ ವೇಳೆ ಪ್ರಿಯಾಂಕ ಮಧ್ಯದ ಬೆರಳು ತೋರಿಸಿದ್ದಾಳೆ. ಕೋಪಗೊಂಡು  ನಾನು ಆಕೆಯ ಕಾರನ್ನ ಫಾಲೋ ಮಾಡಿ ಕಾರನ್ನು ಅಡ್ಡಗಟ್ಟಿ ಬೈದು ಕ್ಷಮೆ ಕೇಳಿ ಎಂದೆ. ಈ ವೇಳೆ ನಾನ್ಯಾಕೆ ಸಾರಿ ಕೇಳ್ಬೇಕು ಎಂದು ಪ್ರಿಯಾಂಕ ಪ್ರಶ್ನಿಸಿದ್ದಳು.

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಮನೆಯಲ್ಲಿದ್ದವಳ ಗಂಡನ ಜೊತೆ ಕೆಳಮನೆಯಲ್ಲಿದ್ದವನ ಹೆಂಡತಿ ಪರಾರಿ?