Select Your Language

Notifications

webdunia
webdunia
webdunia
webdunia

ಒಂದು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹಲ್ಲೆ

ಒಂದು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹಲ್ಲೆ
bangalore , ಶುಕ್ರವಾರ, 20 ಜನವರಿ 2023 (19:06 IST)
ಅವ್ರೆಲ್ಲ ಪರಿಚಯಸ್ಥರೇ. ಕಬಾಬ್ ಸಾಲ‌ ಕೇಳಿಕೊಂಡು ಬಂದಿದ್ದರು.ಕೊಡದಿದ್ದಗೆ 90 ರೂಪಾಯಿ ಕೊಟ್ಟು 30 ರೂಪಾಯಿ ಸಾಲ ಉಳಿಸಿ ಹೋಗಿದ್ರು.ಹಾಗ್ ಹೋಗಿ ಹೀಗ್ ಬಂದವರು ರೊಚ್ಚಿಗೆದ್ದಿದ್ರು.ಹೋಟೆಲ್ ಮಾಲಿಕನೊಗೆ ಹಿಗ್ಗಾಮುಗ್ಗ ಥಳಿಸಿದ್ರು.ಹೋಟೆಲ್ ಮಾಲೀಕನನ್ನ ಅದ್ಹೇಗೆ ಥಳಿಸ್ತಿದ್ದಾರೆ.ಹೊಡೆದ ಹೊಡೆತಕ್ಕೆ ಓನರ್ ತುಟಿಯೇ ಓಪನ್ ಆಗಿಬಿಟ್ಟಿತ್ತು.ಇಲ್ಲಿನೋ ಅತಿದೊಡ್ಡ ತಪ್ಪೇ ಆಗಿಹೋಗಿದೆ.ಅದಕ್ಕೆ ಈ ಪರಿ ಹೊಡಿತಿದ್ದಾರೆ ಅನ್ಕೋಬೇಡಿ.ಇಲ್ಲಿ ಗಲಾಟೆ ಆಗಿದ್ದು ಕೇವಲ ಒಂದು ಕಬಾಬ್ ಪೀಸ್ ಗಾಗಿ ಕೋಣನಕುಂಟೆಯ ಬೀರೇಶ್ವರ ನಗರದಲ್ಲಿರೊ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲ್.ಜನವರಿ 18 ರಾತ್ರಿ ಹೋಟೆಲ್ ಗೆ ಬಂದ ಅಭಿ,ಮನು ಮತ್ತು ಇಬ್ಬರು ಸ್ನೇಹಿತರು ಕಬಾಬ್ ಸಾಲ‌ ಕೇಳಿದ್ದಾರೆ.ಆದರೆ ಹೋಟೆಲ್ ಮಾಲೀಕ ಬಾಬಣ್ಣ ಸಾಲ ಕೊಡೋದಕ್ಕೆ ನಿರಾಕರಿಸಿದ್ದಾನೆ.ಹಾಗಾಗಿ 120 ರೂಪಾಯಿ ಒಂದು ಪ್ಲೇಟ್ ಕಬಾಬ್ ಗೆ 90 ರೂಪಾಯಿ ಕೊಟ್ಟು 30 ರೂಪಾಯಿ ಸಾಲ ಉಳಿಸಿದ್ರು.ಪರಿಚಯಸ್ಥರೇ ಅಲ್ವಾ ಅಂತಾ ಮಾಲೀಕ ಕೂಡ ಕಬಾಬ್ ಕೊಟ್ಟು ಕಳುಹಿಸಿದ್ದ.ಆಮೇಲೆ ಅದೇನಾಯ್ತೋ ಏನೋ ಕೆಲವೇ ಕ್ಷಣದಲ್ಲಿ ಹೋಟೆಲ್ ಗೆ ಮತ್ತೆ ಆಗಮಿಸಿದ ಕಿಡಿಗೇಡಿಗಳು.ಒಂದು ಪ್ಲೇಟ್ ಕಬಾಬ್ ಗೆ 10 ಪೀಸ್ ಇರ್ಬೇಕು.9 ಪೀಸ್ ಮಾತ್ರ ಕೊಟ್ಟಿದ್ದೀಯಾ ಅಂತಾ ಜಗಳಕ್ಕೆ ಇಳಿದಿದ್ದಾರೆ.ಮಾತಿಗೆ ಮಾತು ಬೆಳೆದು ಹೋಟೆಲ್ ಮಾಲೀಕ ಬಾಬಣ್ಣಗೆ ನಾಲ್ವರು ಆರೋಪಿಗಳು ಥಳಿಸಿದ್ದು,ತುಟಿ ಒಡೆದು ಗಾಯವಾಗಿದೆ.ಇದು ಉದ್ದೇಶಪೂರ್ವಕ ಹಲ್ಲೆ ಅಂತಾ ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ.
ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ,ಘಟನೆ ಸಂಬಂಧಪಟ್ಟಂತೆ ಬಾಬಣ್ಣ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತನಿಖೆ ಕೈಗೊಂಡ ಪೊಲೀಸರು ಮನು ಮತ್ತು ಅಭಿ ಎಂಬ ಇಬ್ಬರನ್ನು ಬಂಧಿಸಿದ್ದ ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ನಿಂದ ಬಿಜೆಪಿಗೆ ಯಾರು ಬರ್ತಾರೆ ಡಿಕೆಶಿಗೆ ಗೊತ್ತು : ಡಿಕೆಶಿ ಗೆ ಸಿಎಂ ಟಾಂಗ್