Select Your Language

Notifications

webdunia
webdunia
webdunia
webdunia

ಗ್ಯಾರಂಟಿ ಯೋಜನೆಗೆ ಷರತ್ತು ಪ್ರಕಟಿಸಿದ ಕಾಂಗ್ರೆಸ್

ಉಚಿತ ವಿದ್ಯುತ್
ಬೆಂಗಳೂರು : 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮನೆಯ ಗೃಹಿಣಿಗೆ ಉಚಿತ 2 ಸಾವಿರ ರೂ. ನೀಡುವ ಯೋಜನೆ ಪ್ರಕಟಿಸಿದ್ದ ಕರ್ನಾಟಕ ಕಾಂಗ್ರೆಸ್ ಈಗ ಷರತ್ತು ವಿಧಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ, ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್, ಆದಾಯ ತೆರಿಗೆ ಕಟ್ಟುವವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತೇವೆ. ಎಲ್ಲಾ ಹೆಣ್ಣು ಮಕ್ಕಳಿಗೆ 2 ಸಾವಿರ ರೂ. ನೀಡುವುದಿಲ್ಲ. ಒಂದು ಕುಟುಂಬದ ಓರ್ವ ಯಜಮಾನಿಗೆ ಮಾತ್ರ 2 ಸಾವಿರ ರೂ. ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಗುಂಡೂರಾವ್ ಅವರು ಈ ಹಿಂದೆಯೇ ರೈತರ ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡಿದ್ದರು. ಈಗ ಹಣ ಇರುವುದರಿಂದಲೇ ಯೋಜನೆ ಮಾಡುತ್ತಿದ್ದೇವೆ. ನಮಗೆ ಕೊಡಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಭರವಸೆ ನೀಡಿದ್ದೇವೆ ಎಂದು ಕಾಂಗ್ರೆಸ್ ಯೋಜನೆಯನ್ನು ಹರಿಪ್ರಸಾದ್ ಸಮರ್ಥಿಸಿಕೊಂಡರು. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಜೆಟ್ ಮಂಡನೆ : ಜೆ.ಸಿ.ಮಾಧುಸ್ವಾಮಿ