Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾ ಫೇಕ್ ಪೋಸ್ಟ್'ಗಳ ಮೇಲೆ ಖಾಕಿ ಹದ್ದಿನಕಣ್ಣು...!

ಸೋಷಿಯಲ್ ಮೀಡಿಯಾ ಫೇಕ್ ಪೋಸ್ಟ್'ಗಳ ಮೇಲೆ ಖಾಕಿ ಹದ್ದಿನಕಣ್ಣು...!
bangalore , ಗುರುವಾರ, 22 ಜೂನ್ 2023 (17:47 IST)
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಇಂದು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ರು. ಇನ್ ಫ್ಯಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರದ ಎಲ್ಲ ವಿಭಾಗದ ಡಿಸಿಪಿಗಳನ್ನು ಒಳಗೊಂಡಂತೆ ಸಭೆ ನಡೆಸಲಾಯ್ತು. ಸಭೆಯಲ್ಲಿ ಸಿಟಿ ಕಮಿಷನರ್ ದಯಾನಂದ್, ಅಡಿಷನಲ್ ಕಮಿಷನರ್ ಗಳಾದ ಸತೀಶ್ ಕುಮಾರ್ರ, ರಮಣ್‌ಗುಪ್ತಾ, ಸಿಸಿಬಿ ಜಾಯಿಂಟ್ ಕಮಿಷನರ್ ಡಾ.ಎಸ್.ಡಿ. ಶರಣಪ್ಪ, ಟ್ರಾಫಿಕ್‌ಕಮಿಷನರ್ ಎಂ.ಎನ್. ಅನುಚೇತ್ ಸೇರಿ‌ ನಗರದ ಎಲ್ಲಾ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ರು. ಕಳೆದ ಜೂನ್ 25 ರಂದು ಮೊದಲ ಬಾರಿಗೆ ಬೆಂಗಳೂರು ಸಿಟಿ ಹೈಯರ್ ಪೊಲೀಸ್ ಆಫೀಸರ್ಸ್ ಜೊತೆ ಮೀಟಿಂಗ್ ಮಾಡಿದ್ದ ಡಿಜಿ ಅಲೋಕ್ ಮೋಹನ್ ಇಂದು ಎರಡನೇ ಬಾರಿಗೆ ಸಭೆ ನಡೆಸಿ ಕೆಲ‌ಮಹತ್ವದ ಸೂಚನೆಗಳನ್ನ ನೀಡಿದ್ರು.ಇಂದು‌ ನಡೆದ ಸಭೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸೋರನ್ನ ಪತ್ತೆ ಹಚ್ಚಬೇಕು. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅಕೌಂಟ್ ಗಳನ್ನ ತೆರೆದು ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಯತ್ನ ನಡೆಸಲಾಗ್ತಿದೆ ಇಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪರಾಧ ಪ್ರಕರಣಗಳನ್ನ ತಡೆಯಲಿಕ್ಕೆ ಡಿಸಿಪಿಗಳು ಡೇ ಬೀಟ್ ಹಾಗೂ ನೈಟ್ ಬೀಟ್ ವ್ಯವಸ್ಥೆಯನ್ನ ಸರಿಯಾಗಿ ಪಾಲನೆ ಮಾಡಬೇಕು. ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ ಠಾಣೆಯಲ್ಲಿ ಹಾಕಿರಬೇಕು. ಹಿರಿಯ ಅಧಿಕಾರಿಗಳು ಕೇವಲ ಎಸಿಪಿ‌ ಇನ್ಸ್'ಪೆಕ್ಟರ್ ಗಳನ್ನ ಮಾತ್ರವಲ್ಲದೇ ಠಾಣೆಗಳಿಗೆ ಭೇಟಿಕೊಟ್ಟು ಸಾರ್ವಜನಿಕರಿಂದ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು. ನಗರದಲ್ಲಿ ರೌಡಿಸಂ ಕಂಟ್ರೋಲ್ ಆಗ್ಬೇಕು. ಆಕ್ಟೀವ್ ಇರುವ ರೌಡಿಗಳ ಮೇಲೆ ನಿಗಾ ಇಟ್ಟು ಸಿಆರ್ಪಿಸಿ 110 ಸೆಕ್ಷನ್ ಅಡಿ ಬಾಂಡ್ ಬರೆಸಿ ವಾರ್ನ್ ಮಾಡ್ಬೇಕೆಂದು ಸೂಚಿಸಿದ್ರು.

 ನಗರದಲ್ಲಿ ಸದ್ಯ ದಾಖಲಾಗಿರುವ ಜಾತಿನಿಂದನೆ ಪ್ರಕರಣಗಳೆಷ್ಟು, ಕೇಸ್ ದಾಖಲಾಗಿ ಚಾರ್ಜ್ ಶೀಟ್ ಆಗದೇ ಪೆಂಡಿಂಗ್ ಇರುವ ಕೇಸ್ ಗಳ ಸಂಖ್ಯೆಯಷ್ಟು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸೈಬರ್ ಕ್ರೈಂ ಪ್ರಕರಣಗಳನ್ನ ತ್ವರಿತಗತಿಯಲ್ಲಿ ಪತ್ತೆ ಹಚ್ಚಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವಂತಹ ಪೋಸ್ಟ್ ಗಳ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಜ್ಯೋತಿ ಹೊಸ ಲಿಂಕ್‌ಗೂ ಶುರುವಾದ ಹೊಸ ಕಾಟ