Publish Date: Thu, 22 Jun 2023 (16:31 IST)
Updated Date: Thu, 22 Jun 2023 (15:13 IST)
ಫ್ರಾನ್ಸ್ ನಲ್ಲಿ ಎಂಬಿಎ ಪದವಿ ಪಡೆದಿರೋ ಈತ ಈತ್ತಿಚೀಗೆ ನಾನೆ ದೇವರು ಯಾಕೆ ಚರ್ಚ್ ಗೆ ಹೋಗ್ತೀಯಾ..ಮನೆಯಲ್ಲಿ ದೇವರನ್ನು ಇಟ್ಕೊಂಡು ಚರ್ಚ್ಗೆ ಯಾಕೆ ಹೋಗೋದು ಎಂದು ತನ್ನ ತಾಯಿಗೆ ಅಗಾಗ ಕೇಳ್ತಿರ್ತಾನಂತೆ. ನಿನ್ನೆ ಚರ್ಚ್ ಗೆ ಹೋದಾಗ ಗಲಾಟೆ ಮಾಡಿದ್ದಾನೆ. ಮತ್ತೆ ನಾನೆ ದೇವರು ನೀವ್ಯಾಕೆ ಆ ದೇವರನ್ನು ಪೂಜಿಸುತ್ತಿರಾ ಎಂದು ಖ್ಯಾತೆ ತೆಗೆದಿದ್ದಾನಂತೆ. ಹೀಗೆ ಕೇಳ್ತಿದ್ದವನು ಮಧ್ಯರಾತ್ರಿ ಚರ್ಚ್ ಗೆ ಎಂಟ್ರಿ ಕೊಟ್ಟಿದ್ದ..ಬರುವಾಗ ಸುತ್ತಿಗೆ ತೆಗೆದುಕೊಂಡು ಬಂದವನು ಚರ್ಚ್ ನಲ್ಲಿದ್ದ ಪಾಟ್ಸ್ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದ್ದ.ಧ್ವಂಸ ಮಾಡಿದವನು ಹೊರಗೆ ಬಂದು ಮಲಗಿದ್ದ ಸೆಕ್ಯೂರಿಟಿ ಯನ್ನ ಎಚ್ಚರಿಸಿ ಹೀಗೆ ಮಾಡಿದ್ದಾಗಿ ಹೇಳಿದ್ದಾನೆ.. ಅಗ ಸೆಕ್ಯೂರಿಟಿ ಈತನಿಗೆ ಥಳಿಸಿ ಪಕ್ಕದಲ್ಲಿರುವ ಬೇರೆ ಸೆಕ್ಯೂರಿಟಿಗಳ ಸಹಾಯದಿಂದ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾನೆ.. ಠಾಣೆಗೆ ಕರೆತಂದ ಪೊಲೀಸರಿಗೆ ಈತನನ್ನ ವಿಚಾರಣೆ ಮಾಡೋದು ದೊಡ್ಡ ಸವಾಲಾಗಿದೆ.. ಏನೇ ಕೇಳಿದ್ರೆ ಬಾಯಿಬಿಟ್ಟಿಲ್ಲ.. ಅಮೇಲೆ ಈತನ ಪೋಟೋವನ್ನ ಹಿಡಿದು ಕೊಂಡು ಏರಿಯಾ ಏರಿಯಾ ಸುತ್ತಿ ಈತನ ವಿಳಾಸವನ್ನ ಪತ್ತೆ ಮಾಡಿದ್ದಾರೆ.ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಚರ್ಚ್ ನ ಭಕ್ತರು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.