Select Your Language

Notifications

webdunia
webdunia
webdunia
webdunia

ನಡು ರಸ್ತೆಯಲ್ಲೇ ಬಡಿದಾಟ..ಏಳು ಜನರಿಗೆ ಗಾಯ..!

Clash in the middle of the road.. Seven people injured
bangalore , ಗುರುವಾರ, 22 ಜೂನ್ 2023 (15:32 IST)
ಗುಂಪುಗಳ ನಡುವೆ ನಡು ರಸ್ತೆಯಲ್ಲಿ ನಡೆದ ಕಾಳಗ ಸುತ್ತಾ ಮುತ್ತಲ ಜನರನ್ನ ನಿಜಕ್ಕೂ ಬೆಚ್ಚಿ ಬೀಳಿಸಿತ್ತು.ಕ್ಷುಲ್ಲಕ ಕಾರಣಕ್ಕಾಗಿ..ಅದು ಕೂಡ ಟಾಟಾ ಏಸ್ ವಾಹನ ಅಡ್ಡ ಬಂದಿದ್ದಕ್ಕೆ, ಆಗಿದ್ದೇನಂದ್ರೆ ಜೂನ್ 18 ರ ರಾತ್ರಿ 9.45 ರ ಸಮಯ.ದೂರುದಾರ ಪ್ರದೀಪ್ ಸೇರಿ ಮೂವರು ಟಾಟಾ ಏಸ್ ವಾಹನದಲ್ಲಿ ತೆರಳ್ತಿದ್ರು..ಪದ್ಮನಾಭನಗರ ರಾಘವೇಂದ್ರ ಬಡಾವಣೆ ಯಲ್ಲಿರುವ ತ್ರಿವೇಣಿ ಕ್ರಿಯೇಟಿವ್ ಅಂಗಡಿ ಮುಂದೆ ಬರ್ತಿದ್ದಂತೆ ಹಿಂದೆಯಿಂದ ಬೈಕ್ ನಲ್ಲಿ ಬಂದ ಕ್ಯಾನ್ ಸಂದೀಪ್ ಮತ್ತು ರಾಜೀವ್ ಟಾಟಾ ಏಸ್ ವಾಹನ ಅಡ್ಡಗಟ್ಟಿದ್ದರು.ಏನೋ ಸೈಡ್ ಬಿಡಕ್ ಆಗಲ್ವಾ ಅಂತಾ ಗಲಾಟೆ ಶುರು ಮಾಡಿದ್ದರು. ಇದರಿಂದ ಕೋಪಗೊಂಡ ಟಾಟಾ ಏಸ್ ವಾಹನದಲ್ಲಿದ್ದ ಪ್ರದೀಪ್ ಗೆಳೆಯ ಸಂದೀಪ್ ಗೆ ಹೊಡೆದಿದ್ದ.ಇದೇ ಘಟನೆ ಕ್ಯಾನ್ ಸಂದೀಪ್ ಮತ್ತು ರಾಜೀವ್ ರೊಚ್ಚಿಗೇಳುವಂತೆ ಮಾಡಿತ್ತು.
ಇಷ್ಟಕ್ಕೆ ಸುಮ್ಮನಾಗದ ಸಂದೀಪ್ ಮತ್ತು ರಾಜೀವ್ ಫೋನ್ ಮಾಡಿ ಹುಡುಗರನ್ನ ಕರೆಸಿದ್ರು.ಸ್ಥಳಕ್ಕೆ ರೌಡಿ ಶೀಟರ್ ಸಂದೀಪ್ ಸೇರಿದಂತೆ ಗೆಳೆಯರು ಬಂದಿದ್ರು.ಪ್ರದೀಪ್ ಶೆಟ್ಟಿ ಕೂಡ ಫೋನ್ ಮಾಡಿ ರೂಮ್ ನಲ್ಲಿದ್ದ ಗೆಳೆಯರನ್ನ ಕರೆಸಿಕೊಂಡಿದ್ದ.ಈ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ.ಗಲಾಟೆಯಲ್ಲಿ ಪ್ರದೀಪ್ ಶೆಟ್ಟಿ ಗುಂಪಿನ ಏಳು ಜನರಿಗೆ ಗಾಯವಾಗಿದೆ.ಓರ್ವನ ಹಲ್ಲು ಉದುರಿದ್ರೆ ಮತ್ತೋರ್ವನ ತಲೆಗೆ ಗಾಯವಾಗಿದೆ..ಘಟನೆ ಸಂಬಂಧ ಪ್ರದೀಪ್ ಶೆಟ್ಟಿ ದೂರಿನ ಅನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ರೌಡಿ ಶೀಟರ್ ಸಂದೀಪ್,ಶಶಾಂಕ್,ಕಿರಣ್,ಶ್ರೀಧರ್ ಸೇರಿ ನಾಲ್ಕು ಜನರನ್ನ ಬಂಧಿಸಿದ್ದು ಪ್ರಮುಖ ಆರೋಪಿ ಕ್ಯಾನ್ ಸಂದೀಪ್ ಸೇರಿ ಏಳು ಜನರ ಪತ್ತೆಗೆ ಬಲೆ ಬೀಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಶಾಲಾ ಮಕ್ಕಳಿಗೆ ವಾರಕ್ಕೊಂದೇ ಮೊಟ್ಟೆ