Select Your Language

Notifications

webdunia
webdunia
webdunia
webdunia

ಶಾಸಕರ ಕಿವಿ ಹಿಂಡಿದ ಖಾದರ್‌ ಮೇಷ್ಟ್ರು

ಖಾದರ್‌

geetha

bangalore , ಸೋಮವಾರ, 19 ಫೆಬ್ರವರಿ 2024 (16:30 IST)
ಬೆಂಗಳೂರು :ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ನಿಗದಿತ ಸಮಯಕ್ಕೆ ಆಗಮಿಸಿದವರ ಪಟ್ಟಿ ಓದಿದ ಯು.ಟಿ. ಖಾದರ ,ಬಳಿಕ ಗೈರು ಹಾಜರಾದವರು ಹಾಗೂ ವಿಳಂಬವಾಗಿ ಆಗಮಿಸುವವರಿಗೆ ಬಿಸಿ ಮುಟ್ಟಿಸಿದರು. ಸದನಕ್ಕೆ ವಿಳಂಬವಾಗಿ ಆಗಮಿಸುವವರು,ಗೈರು ಹಾಜರಾಗುವವರು ಹಾಗೂ ಊಟದ ಸಮಯದಲ್ಲಿ ನಾಪತ್ತೆಯಾಗುವ ಶಾಸಕರಿಗೆ ಸಭಾಪತಿ ಯು.ಟಿ. ಖಾದರ್‌ ಕಿವಿ ಹಿಂಡಿದ ಘಟನೆ ಸೋಮವಾರದ ಅಧಿವೇಶನದ ವೇಳೆ ನಡೆದಿದೆ. 

ಊಟಕ್ಕೆಂದು ಹೊರಗೆ ಹೋಗುವ ಶಾಸಕರು ಮತ್ತೆ ವಾಪಸ್‌ ಬರುವುದೇ ಇಲ್ಲ. ಇಡೀ ಬೆಂಗಳೂರಿನ್ಲಲಿಯೇ ಎಲ್ಲೂ ಸಿಗದಂತಹ ಅತ್ಯುತ್ತಯ ಸಸ್ಯಾಹಾರಿ ಊಟವನ್ನು ವಿಧಾನಸಭೆಯಲ್ಲೇ ವ್ಯವಸ್ಥೆ ಮಾಡಲಾಗಿದೆ. ಶಾಸಕರು ಊಟದ ನೆಪ ಹೇಳಿ ಹೊರಗೆ ಹೋಗಬೇಡಿ. ಇಲ್ಲಿಯೇ ಊಟ ಮಾಡಿ ಸಮಯಕ್ಕೆ ಸರಿಯಾಗಿ ಸದನಕ್ಕೆ ಆಗಮಿಸಿ ಎಂದು ಯು.ಟಿ.ಖಾದರ್‌ ಶಾಸಕರಿಗೆ ತಾಕೀತು ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನದಲ್ಲಿ ಗುಡ್ ನ್ಯೂಸ್ ಕೊಡುವುದಾಗಿ ಹೇಳಿದ ಕಮಲ್ ಹಾಸನ್