Webdunia - Bharat's app for daily news and videos

Install App

ವಾಚ್ ತುಂಬಿದ್ದ ಲಾರಿಯನ್ನೇ ಹೈಜಾಕ್ ಮಾಡಿದ್ದ ಖದೀಮರು

Webdunia
ಮಂಗಳವಾರ, 24 ಜನವರಿ 2023 (19:59 IST)
ಟೆಂಪೊ ಅಡ್ಡಗಟ್ಟಿ ಬರೋಬ್ಬರಿ 57 ಲಕ್ಷ ಮೌಲ್ಯದ ವಾಚುಗಳ ಸಮೇತ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನ ಆರ್.ಆರ್.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಮೀರ್ ಅಹಮದ್ ಹಾಗೂ ಸೈಯದ್ ಶಾಹೀದ್  ಬಂಧಿತ ಆರೋಪಿಗಳು. ಜನವರಿ 15ರ ರಾತ್ರಿ 10:45ರ  ಗಂಟೆಯ ಸುಮಾರಿಗೆ ಆರ್.ಆರ್.ನಗರದ ಜವರೇಗೌಡನ ದೊಡ್ಡಿ ಬಳಿ ಜೈದೀಪ್ ಎಂಟರ್ಪ್ರೈಸಸ್ ಹೆಸರಿನ ವೇರ್ ಹೌಸ್‌ಗೆ ಸೇರಿದ ಟೆಂಪೋವನ್ನ ಅಡ್ಡಗಟ್ಟಿದ್ದ ಆರೋಪಿಗಳು ಇಬ್ಬರ ಮೇಲೆ ಹಲ್ಲೆ ಮಾಡಿ ಟೆಂಪೋ ಸಮೇತ ಪರಾರಿಯಾಗಿದ್ದರು.
57 ಲಕ್ಷ ಮೌಲ್ಯದ ಟೈಟಾನ್ ಕಂಪನಿಯ 23 ಬಾಕ್ಸ್ ಗಳಿರುವ 1282 ವಾಚುಗಳಿದ್ದ ಟೆಂಪೋವನ್ನ ವೇರ್ ಹೌಸ್ ಕೆಲಸಗಾರರಾದ ಜಾನ್ ಮತ್ತು ಬಿಸಾಲ್ ಕಿಸಾನ್ ಮಾಲೂರಿನ‌ ಪ್ಲಿಪ್ ಕಾರ್ಟ್ ಮೂಲಕ ಆರ್.ಆರ್‌.ನಗರದ ಜವರೇಗೌಡ ನಗರದಲ್ಲಿರುವ ಬಳಿ ಬರುವಾಗ ಆರೋಪಿಗಳು  ಒಂದು ಕಾರ್ 3 ದ್ವಿಚಕ್ರ ವಾಹನಗಳಲ್ಲಿ ಆರೋಪಿಗಳು ಅಡ್ಡಗಟ್ಟಿ ಕೈಗಳಿಂದ ಹಲ್ಲೆ ಮಾಡಿ ಟೆಂಪೊ ಸಮೇತ ಕೊಂಡೊಯ್ದಿದ್ದರು. ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಇಬ್ಬರನ್ನು ಬಂಧಿಸಲಾಗಿತ್ತು.
 
ಆರೋಪಿಗಳ ವಿಚಾರಣೆ ವೇಳೆ ದೂರುದಾರ ಹನುಮೇಗೌಡನ  ಟೆಂಪೊ ತನ್ನ ಬೈಕಿಗೆ ಟಚ್ ಮಾಡಿದ್ದ.‌ ಇದರಿಂದ ಅಸಮಾನಧಾನಗೊಂಡು ಟೆಂಪೋ ಹಿಂಬಾಲಿಸಿ ಹಲ್ಲೆ ಮಾಡಿ ಟೆಂಪೊ ಸಮೇತ ಹೊಯ್ದಿದ್ದರು. ವಾಹನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್ ಗಳನ್ನು ತೆಗೆದುಕೊಂಡು ಬೇರೆಡೆ ಸಾಗಾಟ ಮಾಡಿದ್ದರು. ಬಳಿಕ ಟೆಂಪೊ ಅದೇ ಜಾಗದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ದ ಈ ಹಿಂದೆ ಕ್ರಿಮಿನಲ್‌ ಕೇಸ್ ಗಳು ದಾಖಲಾಗಿಲ್ಲ. ಸದ್ಯ ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಡಿಕೆ ಶಿವಕುಮಾರ್ ಆರ್ ಎಸ್ಎಸ್ ಹಾಡಿಗೆ ಕೆಎನ್ ರಾಜಣ್ಣ ಗರಂ: ಅವರು ಏನು ಮಾಡಿದ್ರೂ ನಡೀತದೆ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇದೊಂದು ಕೆಲಸ ಮಾಡಬೇಕು

ಮತಪರಿಷ್ಕರಣೆ ಯಾಕೆ ಮುಖ್ಯ ಎನ್ನುವುದಕ್ಕೆ ಬಿಹಾರದ ಈ ಘಟನೆಯೇ ಸಾಕ್ಷಿ

ಮುಂದಿನ ಸುದ್ದಿ
Show comments