Select Your Language

Notifications

webdunia
webdunia
webdunia
webdunia

ಕೆಜಿಎಫ್ – 2 ಚಿತ್ರೀಕರಣ ಸ್ಥಗಿತ ಪ್ರಕರಣ: ವಿಚಾರಣೆ ಸೆ. 5ಕ್ಕೆ ಮುಂದೂಡಿಕೆ

ಕೆಜಿಎಫ್ – 2 ಚಿತ್ರೀಕರಣ ಸ್ಥಗಿತ ಪ್ರಕರಣ: ವಿಚಾರಣೆ ಸೆ. 5ಕ್ಕೆ ಮುಂದೂಡಿಕೆ
ಕೋಲಾರ , ಶನಿವಾರ, 31 ಆಗಸ್ಟ್ 2019 (18:26 IST)
ಕೆಜಿಎಫ್ ಭಾಗ 2 ರ ಚಿತ್ರೀಕರಣ ಸ್ಥಗಿತದ ಆದೇಶ ಕುರಿತು ಕೋರ್ಟ್ ನಲ್ಲಿನ ಪ್ರಕರಣದ ಕುರಿತಾದ ವಿಚಾರಣೆಯನ್ನು ಮುಂದೂಡಲಾಗಿದೆ.

ಕೋಲಾರದ ಕೆಜಿಎಫ್ ನಗರದಲ್ಲಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಚಿತ್ರೀಕರಣ ಸ್ಥಗಿತದ ಕುರಿತಾದ ತಡೆಯಾಜ್ಞೆ ವಿಚಾರಣೆಯು ಸೆ.5 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ತಡೆಯಾಜ್ಞೆ ತೆರವು ಕೋರಿ ಚಿತ್ರ ತಂಡದ ಪರವಾಗಿ ಮನವಿ ಸಲ್ಲಿಸಿದ್ದರು ವಕೀಲ ಶಾಂತಿಭೂಷಣ್.
ಪರಿಸರ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಸ್ಥಳೀಯ ನ್ಯಾಯಾಲಯವು ಸೂಕ್ತ ವೇದಿಕೆಯಲ್ಲ ಎಂದು ವಕೀಲ ಶಾಂತಿಭೂಷಣ್ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಕೆಜಿಎಫ್ ನ ಸೈಯನೈಡ್ ಗುಡ್ಡದ ಪರಿಸರ ಹಾಳಾಗುತ್ತಿರುವ ದೂರಿನ ಹಿನ್ನಲೆಯಲ್ಲಿ ತಡೆಯಾಜ್ಞೆ ಕೊಟ್ಟಿತ್ತು ಕೋರ್ಟ್.
ಕೆಜಿಎಫ್ ನಿವಾಸಿ ಶ್ರೀನಿವಾಸ್ ಚಿತ್ರೀಕರಣ ಸ್ಥಗಿತ ಕೋರಿ ಮನವಿ ಸಲ್ಲಿಸಿದ್ದರು.

ಇಂದು ತಡೆಯಾಜ್ಞೆ ತೆರವಿಗೆ ಚಿತ್ರ ತಂಡದ ಪರವಾಗಿ ವಕೀಲ ಶಾಂತಿ ಭೂಷಣ್ ಮನವಿ ಮಾಡಿದರು.
ಸೆ.5 ಕ್ಕೆ ವಾದ ಮಂಡಿಸಲಿದ್ದಾರೆ ಶ್ರೀನಿವಾಸ್ ಪರ ವಕೀಲರು. ಕೋರ್ಟ್ ನಿರ್ದೇಶನದ ಮೇರೆಗೆ ಆ.27 ರಿಂದ ಸ್ಥಗಿತಗೊಂಡಿದೆ ಚಿತ್ರೀಕರಣ.

ನಟ ಯಶ್ ಅಭಿನಯದ ಬಹು ತಾರಾಗಣದ ಚಿತ್ರ ಕೆಜಿಎಫ್ ಚಾಪ್ಟರ್ - 2 ಚಿತ್ರ ಚಿತ್ರೀಕರಣ ಕುರಿತಾದ ಪ್ರಕರಣ ಇದಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಪ್ರತಿಷ್ಠಾಪನೆ ಮಾಡ್ತೀರಾ? ಈ ರೂಲ್ಸ್ ತಪ್ಪದೇ ಪಾಲಿಸಿ