ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಾರ್ಯಚರಣೆ ಮುಂದುವರಿದಿದ್ದು, ತಡರಾತ್ರಿ ಮತ್ತೆ 15 ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೇ ಡಿಜೆ ಹಳ್ಳಿ ಠಾಣೆ ಎದುರು ಆರೋಪಿಗಳ ಪೋಷಕರು ಹೈಡ್ರಾಮಾ ನಡೆಸಿದ್ದಾರೆ. ಕೋರ್ಟ್ ಗೆ ಕರೆದೊಯ್ಯುವ ವೇಳೆ ತಮ್ಮ ಮಕ್ಕಳನ್ನು ನೋಡಿ ಪೋಷಕರು ಕಣ್ಣೀರು ಹಾಕಿದ್ದಾರೆ.