Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲೂ ಕೇರಳದ ಮಾದರಿ ಲವ್ ಜಿಹಾದ್: ಬಿವೈ ವಿಜಯೇಂದ್ರ ಗಂಭೀರ ಆರೋಪ

Vijayendra

Sampriya

ಹುಬ್ಬಳ್ಳಿ , ಶನಿವಾರ, 4 ಮೇ 2024 (14:10 IST)
Photo Courtesy X
ಹುಬ್ಬಳ್ಳಿ: ಕೇರಳದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಲವ್ ಜಿಹಾದ್ ಶುರುವಾಗಿದೆ. ಕರ್ನಾಟಕದಲ್ಲೂ ಲವ್ ಜಿಹಾದ್ ಪ್ರಕರಣಗಳು ನಿರಾತಂಕವಾಗಿ ನಡೆಯುತ್ತಿವೆ. ಹಿಂದೂ ಹೆಣ್ಣುಮಕ್ಕಳ ಕುಟುಂಬದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜನ ಉತ್ತರ ಕೊಡುತ್ತಾರೆ  ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಸಂಸದ ಪ್ರಜ್ವಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನವರಿಗೆ ಮೊದಲೇ ಪೆನ್​ಡ್ರೈವ್​ ಸಿಕ್ಕಿದ್ದು, ಇದೀಗ ಪೆನ್​ಡ್ರೈವ್ ಹಿಂದೆ ಬಿದ್ದಿದ್ದಾರೆ. ನಾವು ಯಾರೂ ಪ್ರಜ್ವಲ್​​ ರೇವಣ್ಣ ಪ್ರಕರಣ ಬೆಂಬಲಿಸಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪೈನ್​ಡ್ರೈವ್​ ಬಗ್ಗೆ ವಿಜಯೇಂದ್ರಗೆ ಮೊದಲೇ ಪತ್ರ ಬರೆದಿದ್ದರು ಅಂತಿದ್ದಾರೆ. ನನಗಂತೂ ಈ ಕ್ಷಣದವರೆಗೂ ನನಗೆ ಯಾವುದೇ ಪತ್ರ ಬಂದಿಲ್ಲ. ಬಹಳ ಜವಾಬ್ದಾರಿಯಿಂದ ಈ ಮಾತು ಹೇಳುತ್ತಿದ್ದೇನೆ. ರಾಜ್ಯ​ ಸರ್ಕಾರಕ್ಕೆ ಗ್ಯಾರಂಟಿ ಬಗ್ಗೆ ವಿಶ್ವಾಸ ಹೋಗಿದೆ. ಹೀಗಾಗಿ ಪೆನ್​ಡ್ರೈವ್ ಹಿಂದೆ ಬಿದ್ದಿದೆ ಎಂದು ವಾಗ್ದಾಳಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇವಣ್ಣ ಮನೆಗೆ ಸಂತ್ರಸ್ತೆಯ ಕರೆತಂದ ಎಸ್ ಐಟಿ: ಇಂದೇ ಎಚ್ ಡಿ ರೇವಣ್ಣ ಬಂಧನ ಸಾಧ್ಯತೆ