Select Your Language

Notifications

webdunia
webdunia
webdunia
webdunia

ಕೋವಿಡ್‌ಶೀಲ್ಡ್ ಪಡೆದವರು ಫ್ರಿಡ್ಜ್ ನೀರು, ಐಸ್‌ ಕ್ರೀ ಸೇವಿಸಬೇಡಿ ಎಂದು ತಪ್ಪು ಮಾಹಿತಿ ಕೊಟ್ಟ ಕಾಲೇಜುಗಳಿಗೆ ನೋಟಿಸ್

CovidShield

Sampriya

ಚಿಕ್ಕಬಳ್ಳಾಪುರ , ಶುಕ್ರವಾರ, 3 ಮೇ 2024 (17:35 IST)
Photo Courtesy X
ಚಿಕ್ಕಬಳ್ಳಾಪುರ: ಕೋವಿಡ್ ನಿಯಂತ್ರಣಕ್ಕಾಗಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್ ಹೃದಯಾಘಾತವಾಗಿ ಹಲವು ಅಡ್ಡಪರಿಣಾಮಗಳು ಉಂಟಾಗಲಿದ್ದು, ಆದ್ದರಿಂದ ಫ್ರಿಡ್ಜ್ ನೀರು, ಆಹಾರ ಸೇವನೆ ಮಾಡಬೇಡಿ ಎಂದು ಸುದ್ದಿ ಹಬ್ಬಿಸಿದ ನಗರದ ಸಿದ್ದರಾಮಯ್ಯ ಲಾ ಕಾಲೇಜು ಹಾಗೂ ಜಚನಿ ಪ್ರಥಮ ದರ್ಜೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಿಂದ ನೋಟಿಸ್ ನೀಡಿದೆ.

ಕೋವಿಡ್‌ಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್‌ ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಸೇರಿ ಹಲವು ರೀತಿಯ ಅಡ್ಡಪರಿಣಾಮಗಳು ಉಂಟಾಗಲಿದ್ದು, ಈ ಹಿನ್ನೆಲೆ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವನೆ ಮಾಡದಂತೆ ಹಲವು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರದ ಮೂಲಕ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ತಪ್ಪು ಮಾಹಿತಿ ನೀಡಿದ ನಗರದ ವಿವಿಧ ಕಾಲೇಜುಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಕಮಿಟಿ ಮುಂದಾಗಿದೆ. ಸೂಚನಾ ಪತ್ರಗಳ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಲಾಗಿದೆ.

ಕಾಲೇಜು ಆಡಳಿತ ಮಂಡಳಿಗಳ ಸೂಚನಾ ಪತ್ರ ವೈರಲ್ ಆಗಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಈ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ  ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬವಾದ ಕಾಂಗ್ರೆಸ್ ಬೇಕಾ, ಪರಂಪರೆ ಕಾಪಾಡುವ ಬಿಜೆಪಿ ಬೇಕಾ, ನೀವೇ ನಿರ್ಧರಿಸಿ: ಅಮಿತ್ ಶಾ