Publish Date: Thu, 31 Aug 2017 (12:47 IST)
Updated Date: Thu, 31 Aug 2017 (12:57 IST)
ಜಿಲ್ಲಾ ವಲಯದ ಕಾಂಗ್ರೆಸ್ ನಾಯಕರ ಸಭೆಗೆ ಗೈರುಹಾಜರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರಕ್ಕೆ ಜೈ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಹೇಳಿಕೆಯಿಂದ ಬೇಸರಗೊಂಡಿರುವ ನಾಯಕರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಹೆಬ್ಬಾಳ್ಕರ್‌ಗೆ ಆದೇಶಿಸಿದ್ದಾರೆ.
ಬೂತ್ ಮಟ್ಟದ ಕಮಿಟಿ ರಚಿಸಲು ವಿಳಂಬ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಕ್ಲಾಸ್ ತೆಗೆದುಕೊಂಡ ಅವರು, ನಿಮಗೆ ಎಂಎಲ್‌ಎ ಮಾಡಿದ್ದು ಪಕ್ಷ ಎನ್ನುವುದು ನೆನಪಿರಲಿ ಎಂದು ಗುಡುಗಿದರು.
ಶೀಘ್ರದಲ್ಲಿಯೇ ಬೂತ್ ಮಟ್ಟದ ಕಮಿಟಿ ರಚಿಸಿ ಪಟ್ಟಿ ನೀಡಿ. ಕೂಡಲೇ ಚುನಾವಣೆಗೆ ಸಿದ್ದರಾಗಲು ಪ್ರಯತ್ನಿಸಿ ಎಂದು ಕಾಂಗ್ರೆಸ್ ಮುಖಂಡರಿಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕಿವಿಮಾತು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.