Select Your Language

Notifications

webdunia
webdunia
webdunia
webdunia

ಕಾವೇರಿ ತಂತ್ರಾಂಶ ಹ್ಯಾಕ್‌ - ವಂಚಕರು ಅರೆಸ್ಟ್‌

Kaveri Software
ಮಂಗಳೂರು , ಸೋಮವಾರ, 30 ಅಕ್ಟೋಬರ್ 2023 (15:20 IST)
ಕರ್ನಾಟಕ ಸರ್ಕಾರದ ಕಾವೇರಿ ತಂತ್ರಾಂಶವನ್ನು ಹ್ಯಾಕ್‌ ಮಾಡಿ ಹಲವರ ಬ್ಯಾಂಕ್‌ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ 3 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 
 
ದೀಪಕ್‌ ಕುಮಾರ್‌ ಹೆಂಬ್ರಮ್‌ (33), ವಿವೇಕ್‌ ಕುಮಾರ್‌ ಬಿಸ್ವಾಸ್‌ (24) ಹಾಗೂ ಮದನ್‌ ಕಮಾ (23) ಬಂಧಿತ ಆರೋಪಿಗಳಾಗಿದ್ದು,ಕಾವೇರಿ ತಂತ್ರಾಂಶ ಹ್ಯಾಕ್‌ ಮಾಡಿದ್ದ ಆರೋಪಿಗಳು ಸಾರ್ವಜನಿಕರ ಆಸ್ತಿ ದಾಖಲೆ, ಬೆರಳಚ್ಚು, ಆಧಾರ್‌ ಹಾಗೂ ಬ್ಯಾಂಕ್‌ ಮಾಹಿತಿಯನ್ನು ಕದ್ದು ವಂಚನೆ ನಡೆಸಿದ್ದರು. 
 
ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್‌ ಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಕರ್ನಾಟಕದ 1 ಸಾವಿರ ನೋಂದಣಿ ಪತ್ರಗಳು ಹಾಗೂ ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳ 300 ಕ್ಕೂ ಅಧಿಕ ಪಿಡಿಎಫ್‌ ಪ್ರತಿಗಳನ್ನು ಆರೋಪಿಗಳಿಂದ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗರೀಕರಿಗೆ ಮತ್ತೆ ಎದುರಾದ ಚಿರತೆ ಭೀತಿ