Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಬಂಧಿತ ಐಸಿಸ್‌ ಉಗ್ರ!

ಪತ್ನಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಬಂಧಿತ ಐಸಿಸ್‌ ಉಗ್ರ!
ಹುಬ್ಬಳ್ಳಿ , ಬುಧವಾರ, 4 ಅಕ್ಟೋಬರ್ 2023 (14:00 IST)
ಐಸಿಸ್ ಉಗ್ರ ಮೊಹಮದ್ ಶಹನವಾಜ್, ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿದ್ದು ಮಾತ್ರವಲ್ಲ ಹುಬ್ಬಳ್ಳಿ, ಧಾರವಾಡದಲಿದ್ದು ದೇಶವಿರೋಧಿ ಕೃತ್ಯ ಮಾಡಿದರೂ ರಾಜ್ಯದ ಭದ್ರತಾ ವಿಭಾಗಕ್ಕೆ ಸಣ್ಣ ಸುಳಿವೂ ಕೂಡ ಸಿಕ್ಕಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಬಂಧನಕ್ಕೊಳಗಾಗಿರುವ ಐಸಿಸ್ ಭಯೋತ್ಪಾದಕ ಶಹನವಾಜ್ ತನ್ನ ಪತ್ನಿ ಬಸಂತಿ ಪಟೇಲ್ ಅವರನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಎಂದು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಹೇಳಿದೆ. ಎನ್ಐಎಯ ಮೋಸ್ಟ್ ವಾಂಟೆಂಡ್ ಉಗ್ರನ ಪಟ್ಟಿಯಲ್ಲಿದ್ದ ಶಹನವಾಜ್, ಕರ್ನಾಟಕದ ಪ್ರತಿಷ್ಠಿತ ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೈನಿಂಗ್ ಎಂಜಿನಿಯರಿಂಗ್ ಅಭ್ಯಾಸ ಮಾಡಿದ್ದ ಎಂದು ತಿಳಿಸಿದ್ದಾರೆ.ಇನ್ನು ಪೊಲೀಸರ ಪ್ರಕಾರ, ಶಹನವಾಜ್ನನ್ನು ಇಂದು ದಕ್ಷಿಣ ದೆಹಲಿಯ ಜೈತ್ಪುರದಲ್ಲಿ ಬಂಧಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಜಲಾನಯನದಲ್ಲಿ ಮಳೆ: ಕೆಆರ್ ಎಸ್ ಡ್ಯಾಮ್ ನಲ್ಲಿ 100 ಅಡಿ ದಾಟಿದ ನೀರಿನ ಸಂಗ್ರಹ