Select Your Language

Notifications

webdunia
webdunia
webdunia
webdunia

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕ ಮಾರಾಟ ಗ್ಯಾರಂಟಿ ಮಾಡ್ತಾರೆ- ಡಿಕೆಶಿ

Karnataka will guarantee sales if BJP comes to power
bangalore , ಭಾನುವಾರ, 30 ಏಪ್ರಿಲ್ 2023 (20:00 IST)
ವಿಜಯನಗರದ ಹೆಬ್ಬಾಲಿಗೆ ಬಂದಾಗ ದೊಡ್ಡ ಸ್ವಾಗತ ನೀಡಿದ್ದೀರಾ.ಜನನ ಉಚಿತ ಮರಣ ಖಚಿತ.ಇದರ ನಡುವೆ ನಾವು ಎನ್ ಮಾಡ್ತಿವಿ ಅನ್ನೊದು ಮುಖ್ಯ.ಪ್ರಿಯಾಕೃಷ್ಣಾ ಹಾಗೂ ಕೃಷ್ಣಪ್ಪ ಲಂಚ ಇಲ್ಲದೆ ೪೦% ಕಮಿಷನ್ ಇಲ್ಲದೆ ಅಧಿಕಾರ ಮಾಡಿದ್ದಾರೆ.ಪ್ರಮಾಣಿಕವಾಗಿ ಸೇವೆ ಮಾಡ್ತಿದ್ದಾರೆ.ಬಸವನಗುಡಿ ಮಹಾಲಕ್ಷ್ಮಿ ಲೇಔಟ್ ಸೇರಿ ಅನೇಕ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಬೇಕು.ಬಿಜೆಪಿ ಸರ್ಕಾರದಿಂದ ಬೆಲೆ ಏರಿಕೆ ಆದಾಯ ಹೆಚ್ಚಾಗಿಲ್ಲಾ.ಅಚ್ಚೇದಿನ್  ಬಂದಿದ್ಯಾ..?ಕೋವಿಡ್ ನಲ್ಲಿ ಆಸ್ಪತ್ರೆ ಬಿಲ್ ಕೊಡ್ತಿನಿ ಅಂದ್ರು ಕೊಟ್ಟಿದ್ದಾರಾ..?ಅಧಿಕಾರ ಇಲ್ಲದೇ ಹೋದ್ರು  ವಿಜಯನಗರಕ್ಕೆ ಬಂದು ಆಕ್ಸಿಜನ್ ಕೊಡಿಸಿದ್ದೇವೆ.ಕಮಲ ಕೆರೆಯಲ್ಲಿದ್ದರೆ ಚಂದಾ.ವಿಜಯನಗರ ಮತ್ತು ಗೋವಿಂದರಾಜ ನಗರದಲ್ಲಿ ಕಾಂಗ್ರೆಸ್ ಗೆಲ್ಲಿಸಿ.೧೩೦/೧೪೦ ಸೀಟುಗಳನ್ನ ಈ ಬಾರಿ ಗೆಲ್ತಿವಿ ಎಂಬ ವಿಶ್ವಾಸವಿದೆ.5 ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದೇವೆ.ಗ್ಯಾರಂಟಿ ಕಾರ್ಡ್ ಗೆ ನಾನು ಸಿದ್ದರಾಮಯ್ಯ ಸಹಿ ಮಾಡಿದ್ದೇವೆ.ಇದು ಬಿಜೆಪಿ ಕೊಡ್ತಾರಾ ಯಡಿಯೂರಪ್ಪ ಕೊಡ್ತಾರಾ..?ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕ ಮಾರಾಟ ಗ್ಯಾರಂಟಿ ಮಾಡ್ತಾರೆ.ಎಂ.ಕೃಷ್ಣಪ್ಪ , ಪ್ರಿಯಾಕೃಷ್ಣಾ  ಕೈ ಹಿಡಿದು ಗೆಲ್ಲಿಸಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ..
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ‌ ಮೋದಿಗೆ ಸಿದ್ದರಾಮಯ್ಯ ಪ್ರಶ್ನೇಗಳ ಸುರಿಮಳೆ